Saturday, January 4, 2025

‘ಬಾಲ ರಾಮ’ನ ವೇಷದಲ್ಲಿರುವ ಈ ಬಿಜೆಪಿ ಸಂಸದ ಯಾರು ಗೊತ್ತಾ?

ಬೆಂಗಳೂರು : ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಹಾಗೂ ಬಾಲರಾಮನ ಪ್ರಾಣ ಪ್ರತಿಷ್ಠೆಗೆ ಕ್ಷಣಗಣನೆ ಶುರುವಾಗಿದೆ. ದೇಶದೆಲ್ಲೆಡೆ ಸಂಭ್ರಮ ಮನೆ ಮಾಡಿದ್ದು, ಇತ್ತ ಬಿಜೆಪಿ ಸಂಸದರೊಬ್ಬರು ತಮ್ಮ ಬಾಲ್ಯದಲ್ಲಿ ಕ್ಕಿಕ್ಕಿಸಿದ ಬಾಲ ರಾಮನ ಫೋಟೋ ಹಂಚಿಕೊಂಡಿದ್ದಾರೆ.

ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರೇ ಈ ಚಿತ್ರದಲ್ಲಿರುವ ಬಾಲರಾಮ. ಅವರ ತಾಯಿ ತೇಜಸ್ವಿಯವರು 6 ವರ್ಷ ಇದ್ದಾಗ ಬಾಲರಾಮನ ವೇಷಭೂಷಣ ತೊಡಿಸಿ ಈ ಫೋಟೋ ತೆಗೆಸಿದ್ದರು. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಸಂಸದರು ಹಂಚಿಕೊಂಡಿದ್ದಾರೆ.

ಸಾಮಾನ್ಯವಾಗಿ ಪ್ರತಿ ಹಿಂದೂ ಮಗುವು ರಾಮ ಮತ್ತು ಕೃಷ್ಣನ ವೇಷವನ್ನು ಧರಿಸುತ್ತಿದ್ದರು. ಆ ಚಿತ್ರಗಳನ್ನು ಪೋಷಕರು ತಮ್ಮ ಜೀವನದುದ್ದಕ್ಕೂ ಜೋಪಾನವಾಗಿ ಇಡುತ್ತಾರೆ. ನನ್ನ ತಾಯಿಯು ಸಂಗ್ರಹಿಸಿರುವ ನನ್ನ 6 ವರ್ಷದ ಬಾಲರಾಮನ ಚಿತ್ರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ನಾಳೆ ‘ಬಾಲ ರಾಮ’ ಉತ್ಸವ

ನಾಳೆ ಪದ್ಮನಾಭನಗರದ ಕಾರ್ಮೆಲ್ ಸ್ಕೂಲ್ ಮೈದಾನದಲ್ಲಿ ಸಂಜೆ 5 ಘಂಟೆಗೆ ಅಯೋಧ್ಯಾ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ‘ಬಾಲ ರಾಮ ಉತ್ಸವ’ ಆಯೋಜಿಸಲಾಗಿದೆ. ಪೋಷಕರು ತಮ್ಮ ಮಕ್ಕಳನ್ನು ರಾಮ, ಲಕ್ಷಣ, ಸೀತೆ, ಹನುಮಾನ್ ವೇಷಭೂಷಣದಲ್ಲಿ ಕರೆದುಕೊಂಡು ಬನ್ನಿ. ಸನಾತನ ಸಂಸ್ಕೃತಿಯ ಪುನರುತ್ಥಾನದ ಭವ್ಯ, ಐತಿಹಾಸಿಕ ಕಾರ್ಯಕ್ರಮವನ್ನು ನಾವು ನೀವೆಲ್ಲರೂ ಸೇರಿ ವಿಜೃಂಭಣೆಯಿಂದ ಆಚರಿಸೋಣ ಎಂದು ಸಂಸದ ತೇಜಸ್ವಿ ಸೂರ್ಯ ಮನವಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES