Wednesday, January 22, 2025

ಸಿದ್ದರಾಮಯ್ಯನವರೇ, ಹಿಮಾಚಲದ ಕಾಂಗ್ರೆಸ್ ನಾಯಕರಿಂದ ಕಲಿತುಕೊಳ್ಳಿ : ಶಾಸಕ ಯತ್ನಾಳ್

ವಿಜಯಪುರ : ಅಯೋಧ್ಯೆಯಲ್ಲಿ ರಾಮಲ್ಲಾನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ವೀಕ್ಷಿಸಲು ನಾಳೆ (ಜ.22) ಕಾಂಗ್ರೆಸ್​ ಸರ್ಕಾರ ರಜೆ ಘೋಷಿಸದಿರುವುದಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಸಿದ್ದರಾಮಯ್ಯನವರೇ, ರಜೆ ಘೋಷಣೆ ಮಾಡಿ. ಹಿಮಾಚಲದ ಕಾಂಗ್ರೆಸ್ ನಾಯಕರಿಂದ ಕಲಿತುಕೊಳ್ಳಿ ಎಂದು ಕುಟುಕಿದ್ದಾರೆ.

ಹಿಂದೂ ವಿರೋಧಿ ನೀತಿಯೇ ಸಿದ್ದರಾಮಯ್ಯನವರ ಆಡಳಿತದ ಧ್ಯೇಯ. ಹಿಮಾಚಲ ಕಾಂಗ್ರೆಸ್ ಸರ್ಕಾರ ನಾಳೆ ಸರ್ಕಾರಿ ರಜೆಯನ್ನು ಘೋಷಣೆ ಮಾಡಿದೆ. ಸಿದ್ದರಾಮಯ್ಯನವರು ಯಾರನ್ನು ಓಲೈಸಲು ಹಿಂದೂಗಳ ಶ್ರದ್ದೆಯನ್ನು ಲೆಕ್ಕಿಸದೆ ಇರುವುದು? ಎಂದು ಚಾಟಿ ಬೀಸಿದ್ದಾರೆ.

ಹಿಂದೂಗಳು ಸ್ವಯಂ ರಜೆ ಪಡೆದುಕೊಳ್ಳಿ

ನಾಳೆ ನಡೆಯಲಿರುವ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ಭಾರತದ ಇತಿಹಾಸ ಪುಟಗಳಲ್ಲಿ ಸುವರ್ಣಾಕ್ಷರದಲ್ಲಿ ರಚಿತವಾಗುವುದು. ಹಿಂದೂ ದಾಸ್ಯದಿಂದ ಹಿಂದೂ ವಿಜಯದ ಆರಂಭದ ಕ್ಷಣಗಳಿಗೆ ನಾವು ಸಾಕ್ಷಿಯಾಗಲಿದ್ದೇವೆ. ಈ ವಿಜಯಕ್ಕೆ ಮಹಾನುಭಾವರು ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ನಾಳೆ ಹಿಂದೂಗಳು ಸ್ವಯಂ ರಜೆ ಪಡೆದುಕೊಂಡು ರಾಮೋತ್ಸವದಲ್ಲಿ ಪಾಲ್ಗೊಳ್ಳಿ, ಶ್ರೀ ರಾಮಚಂದ್ರನನ್ನು ಭವ್ಯವಾಗಿ ಸ್ವಾಗತಿಸಿ ಎಂದು ಶಾಸಕ ಯತ್ನಾಳ್ ಕರೆ ಕೊಟ್ಟಿದ್ದಾರೆ.

RELATED ARTICLES

Related Articles

TRENDING ARTICLES