Sunday, December 22, 2024

ಅಶ್ವತ್ಥ ಎಲೆಯಲ್ಲಿ ಅರಳಿದ ಶ್ರೀರಾಮ

ಅಯೋಧ್ಯ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದ್ದು, ಎಲ್ಲವೂ ಎಲ್ಲೆಡೆಯೂ ರಾಮಮಯ ಆಗ್ತಿದೆ.

ಹೌದು,ಶ್ರೀರಾಮ ಜನ್ಮ ಭೂಮಿಯಲ್ಲಿ ಮಂದಿರ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಕೋದಂಡರಾಮನ ಚಿತ್ರವನ್ನು ಅಶ್ವತ್ಥ ಎಲೆಯಲ್ಲಿ ಗಣೇಶ್ ರಾಜ್ ಸರಳೇಬೆಟ್ಟು ಎಂಬುವರು ರಚಿಸಿ ಗಮನ ಸೆಳೆದಿದ್ದಾರೆ.

ಇವರು ಬಾರ್ಕೂರಿನ ಶ್ರೀಕುಲಮಾಸ್ತ್ರಿಅಮ್ಮನ ದೇವಸ್ಥಾನದ ಆವರಣದಲ್ಲಿರುವ ಅಶ್ವತ್ಥ ಮರದ ಎಲೆಯಲ್ಲಿ ರಾಮ ಚಿತ್ರ ಬಿಡಿಸಿದ್ದಾರೆ.

ಇದನ್ನೂ ಓದಿ: ಕೇಕ್​ನಲ್ಲಿ ಅರಳಿದ ಅಯೋಧ್ಯೆ ರಾಮ ಮಂದಿರ

ಜನವರಿ 22ರಂದು ಪರ್ಕಳದಲ್ಲಿ ಆಯೋಜಿಸಲಾಗಿರುವ ಅಯೋಧ್ಯೆಯಲ್ಲಿ ರಾಮಮಂದಿರದ ವಿಗ್ರಹ ಪ್ರತಿಷ್ಠಾಪನಾ ಸಂಭ್ರಮಾಚರಣೆಯಲ್ಲಿ ಈ ಚಿತ್ರವನ್ನು ಪ್ರದರ್ಶನಕ್ಕೆ ಇಡಲಾಗುವುದು ಎಂದು ಅವರು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES