Monday, December 23, 2024

ರಾಮ ಲಲ್ಲಾ ವಿಗ್ರಹ ಬಾಲ ರಾಮನಂತೆ ಕಾಣುತ್ತಿಲ್ಲ: ದಿಗ್ವಿಜಯ್​ ಸಿಂಗ್

ಭೋಪಾಲ್: ಅಯೋಧ್ಯೆ ರಾಮ ಮಂದಿರದಲ್ಲಿ ಇರಿಸಲಾಗಿರುವ ರಾಮಲಲ್ಲಾ ವಿಗ್ರಹವು ಬಾಲ ರಾಮನ ಥರ ಕಾಣುತ್ತಿಲ್ಲ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಹೇಳಿ ಹೊಸ ವಿವಾದ ಸೃಷ್ಟಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಬರೆದಿದುಕೊಂಡಿರುವ ಅವರು ನಾನು ಮೊದಲಿನಿಂದಲೂ ಈ ಮಾತನ್ನು ಹೇಳುತ್ತಿದ್ದೇನೆ. ವಿವಾದಾತ್ಮಕವಾಗಿದ್ದ ಮತ್ತು ನಾಶವಾದ ರಾಮ್ ಲಲ್ಲಾ ವಿಗ್ರಹ ಎಲ್ಲಿದೆ? ಅದರ ಬದಲಿಗೆ ಎರಡನೇ ಪ್ರತಿಮೆಯ ಅಗತ್ಯವೇನಿತ್ತು? ನಮ್ಮ ಗುರು ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಜೀ ಮಹಾರಾಜ್ ಅವರು ರಾಮ ಜನ್ಮಭೂಮಿ ದೇವಾಲಯದಲ್ಲಿ ಭಗವಾನ್ ರಾಮನ ವಿಗ್ರಹವು ಮಗುವಿನ ರೂಪದಲ್ಲಿರಬೇಕು ಮತ್ತು ತಾಯಿ ಕೌಸಲ್ಯನ ಮಡಿಲಲ್ಲಿರಬೇಕು ಎಂದು ಸಲಹೆ ನೀಡಿದ್ದರು. ಆದರೆ ದೇವಾಲಯದಲ್ಲಿ ಕುಳಿತಿರುವ ವಿಗ್ರಹವು ಮಗುವಿನಂತೆ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.

ಗುರುವಾರ ಗರ್ಭಗುಡಿಯಲ್ಲಿ ನಡೆದ ಪ್ರತಿಷ್ಠಾಪನಾ ಸಮಾರಂಭದಲ್ಲಿ ಮುಸುಕು ಧರಿಸಿದ ವಿಗ್ರಹದ ಮೊದಲ ಫೋಟೋ ಬಹಿರಂಗವಾಗಿದೆ.

‘ರಾಮ್ ಲಲ್ಲಾ’ ವಿಗ್ರಹವನ್ನು ಕರ್ನಾಟಕದ ಪ್ರಸಿದ್ಧ ಶಿಲ್ಪಿ ಅರುಣ್ ಯೋಗಿರಾಜ್ ಹತ್ತಿದ್ದಾರೆ. ಈ ವಿಗ್ರಹ 51 ಇಂಚು ಎತ್ತರ ಮತ್ತು 1.5 ಟನ್ ತೂಕವಿದೆ. ವಿಗ್ರಹವು ಭಗವಾನ್ ರಾಮನನ್ನು ಕಮಲದ ಮೇಲೆ ನಿಂತಿರುವ ಐದು ವರ್ಷದ ಮಗುವಾಗಿ ಚಿತ್ರಿಸಿದೆ.

ಇದನ್ನೂ ಓದಿ: ಗಂಡು ಮಗುವಿಗೆ ಜನ್ಮ ನೀಡಿದ 10ನೇ ತರಗತಿ ವಿದ್ಯಾರ್ಥಿನಿ!

ಜನವರಿ 22 ರಂದು ನಿಗದಿಯಾಗಿದುವ ರಾಮ ದೇವಾಲಯದ ‘ಪ್ರಾಣ ಪ್ರತಿಷ್ಠಾ ಸಮಾರಂಭದ ಸಿದ್ಧತೆಯ ಭಾಗವಾಗಿ ಆಯೋಧ್ಯೆ ನಗರವನ್ನು ಗುರುವಾರ ಆಕರ್ಷಕವಾದ ಹೂವುಗಳಿಂದ ಅಲಂಕರಿಸಲಾಗಿದೆ. ಇದಕ್ಕೂ ಮುನ್ನ ಮಂಗಳವಾರ, ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರು ಬಿಜೆಪಿ, ವಿಶ್ವ ಹಿಂದೂ ಪರಿಷತ್ ಮತ್ತು ಆರ್‌ಎಎಸ್‌ಗಳು ಬಾಬರಿ ಮಸೀದಿಯನ್ನು ಕೆಡವಲು ಬಯಸಿದ್ದವೇ ಹೊರತು ಹೊರತು ದೇವಾಲಯ ನಿರ್ಮಿಸಲು ಬಯಸಿರಲಿಲ್ಲ.

ಮಸೀದಿ ನೆಲಸಮವಾದರೆ ಮಾತ್ರ ಈ ವಿಚಾರವನ್ನು ಕೋಮು ವಿಷಯವನ್ನಾಗಿಸಬಹುದು ಎಂಬುದೇ ಇದಕ್ಕೆ ಕಾರಣ ಎಂದು ಆರೋಪಿಸಿದ್ದರು.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ಕಾಂಗ್ರೆಸ್ ಎಂದಿಗೂ ವಿರೋಧಿಸಿಲ್ಲ. ಆದರೆ ನ್ಯಾಯಾಲಯದ ತೀರ್ಪು ಬರುವವರೆಗೂ ಕಾಯಬೇಕೆಂಬುದು ನಮ್ಮ ನಿಲುವಾಗಿತ್ತು ಎಂದು ಸಿಂಗ್ ಹೇಳಿದರು.

ನ್ಯಾಯಾಲಯದ ನಿರ್ಧಾರದವರೆಗೆ ಕಾಯುವಂತೆ ಮಾತ್ರ ನಾವು ಹೇಳಿದ್ದೆವು.

 

 

RELATED ARTICLES

Related Articles

TRENDING ARTICLES