Monday, December 23, 2024

ರೇಪ್ ಮಾಡುವವರನ್ನ ಬ್ರದರ್-ಸಿಸ್ಟರ್ ಅಂದಿಯಲ್ಲಪ್ಪ : ಆರ್. ಅಶೋಕ್

ಹಾವೇರಿ : ಜಿಲ್ಲೆಯ ಹಾನಗಲ್​ನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣ ಖಂಡಿಸಿ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್​.ಅಶೋಕ್, 8 ತಿಂಗಳಲ್ಲಿ ಈ ಸರ್ಕಾರ ಮಂಗಳೂರಲ್ಲಿ ಕುಕ್ಕರ್ ಬ್ಲಾಸ್ಟ್ ಆದಾಗ ಇವರೆಲ್ಲ ನಮ್ಮ ಬ್ರದರ್ ಸಿಸ್ಟರ್ ಅಂದ್ರು.. ಈಗ ಸಿಸ್ಟರ್ ರೇಪ್ ಆಗಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಕುಟುಕಿದರು.

ಎಲ್ಲಪ್ಪ ನಿನ್ನ ಬ್ರದರ್, ಸಿಸ್ಟರ್​ಗಳು.. ರೇಪ್ ಮಾಡುವವರನ್ನ ಬ್ರದರ್ ಸಿಸ್ಟರ್ ಅಂದಿಯಲ್ಲಪ್ಪ. ರಾಜ್ಯದಲ್ಲಿ ರೇಪ್ ಗಳು ದಿನನಿತ್ಯ ನಡೆಯುತ್ತಿವೆ. ಹಾವೇರಿ ಜಿಲ್ಲೆಯಲ್ಲಿ 6 ತಿಂಗಳಲ್ಲಿ 7 ರೇಪ್ ಆಗಿವೆ ಎಂದು ಕಾಂಗ್ರೆಸ್ ಸರ್ಕಾರದ ಈ ಧೊರಣೆ ವಿರುದ್ಧ ಆರ್.ಅಶೋಕ್ ವಾಗ್ದಾಳಿ ನಡೆಸಿದರು.

ಅಲ್ಪಸಂಖ್ಯಾತರನ್ನ ಏನು ರಕ್ಷಣೆ ಮಾಡ್ತಿರಿ..?

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಒಬ್ಬ ಹೆಣ್ಣುಮಗಳನ್ನ ರಕ್ಚಣೆ ಮಾಡಲು ಸಾಧ್ಯವಾಗಿಲ್ಲ. ಅಲ್ಪಸಂಖ್ಯಾತರನ್ನ ಏನು ರಕ್ಷಣೆ ಮಾಡ್ತಿರಿ..? ದುರಾಡಳಿತದಿಂದ ಗೂಂಡಾ ರಾಜ್ಯ ಆಗ್ತಿದೆ. ಇದನ್ನ ಸುಮ್ಮನೆ ಬಿಡಲ್ಲ, ತಾರ್ಕಿಕ ಅಂತ್ಯಕ್ಕೆ ಒಯ್ಯುತ್ತೇವೆ. ಪ್ರಕರಣದ ಎಸ್​ಐಟಿ ತನಿಖೆ ಆಗಲಿ, ತಪ್ಪಿತಸ್ಥರಿಗೆ ಜೀವಾವದಿ ಶಿಕ್ಷೆಯಾಗಬೇಕು. ಎಸ್​ಐಟಿ ಬೇಡಿಕೆ ನಿರಂತರವಾಗಿರುತ್ತದೆ. ತಾಲೂಕು, ಜನರ ಬಳಿಗೆ ಈ ಹೋರಾಟ ಕೊಂಡೊಯ್ಯುತ್ತೇವೆ ಎಂದು ಎಚ್ಚರಿಕೆ ನೀಡಿದರು.

RELATED ARTICLES

Related Articles

TRENDING ARTICLES