Monday, December 23, 2024

ರಾಮಂದಿರದ ಸ್ಥಳದಲ್ಲಿ ಮುಸ್ಲಿಮರು 500 ವರ್ಷ ನಮಾಜ್ ಮಾಡಿದ್ರು : ಅಸಾದುದ್ದೀನ್ ಓವೈಸಿ

ಕಲಬುರಗಿ : ಅಯೋಧ್ಯೆಯ ರಾಮಂದಿರದ ಸ್ಥಳದಲ್ಲಿ ಮುಸ್ಲಿಮರು 500 ವರ್ಷಗಳ ಕಾಲ ನಮಾಜ್ ಮಾಡಿದ್ದಾರೆ ಎಂದು ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿರುವ ಅವರು, ಗೋಡ್ಸೆ ಗೋಲಿ ಹೊಡೆದಾಗ ಗಾಂಧಿ ‘ಹೇ ರಾಮ’ ಎಂದಿದ್ದರು. ಭಾರತದ ಮುಸ್ಲಿಮರಿಂದ ವ್ಯವಸ್ಥಿತವಾಗಿ ಬಾಬರಿ ಮಸೀದಿಯನ್ನು ಕಸಿದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪು ಬಂದಾಗ ನಾನು ಹೇಳಿದ್ದೆ. ಇಂತಹ ಸಾಕಷ್ಟು ವಿಚಾರಗಳು ಮುಂದೆ ಹೊರಬರಲಿದೆ. ಈಗ ಸಂಘ ಪರಿವಾರ ಎಲ್ಲಾ ಕಡೆ ಹೋಗಿ ಇಲ್ಲಿ ಮಸೀದಿ ಇರಲಿಲ್ಲ ಎಂದು ಹೇಳುತ್ತಿದ್ದಾರೆ. ಒಂದು ವೇಳೆ ಆ ದಿನ ಜಿ.ಬಿ ಪಂತ್ ರಾಮನ ಮೂರ್ತಿ ತೆಗೆದಿಟ್ಟಿದ್ದರೆ, 1986 ಕೀಲಿ ತೆಗೆಯದೇ ಇದ್ದಿದ್ದರೆ ಹಾಗೂ ಬಾಬ್ರಿ ಮಸೀದಿ ಕೆಡವದೇ ಇದ್ದಿದ್ದರೆ ಇವತ್ತು ನಮಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಬೇಸರಿಸಿದ್ದಾರೆ.

ಮುಸ್ಲಿಮರಿಗೆ ಮೋದಿ ಸಂದೇಶ ಕೊಟ್ಟಿದ್ದಾರೆ

ಪ್ರಧಾನಿ ಮೋದಿ ಬಹುಸಂಖ್ಯಾತ ಮತಗಳ ಕ್ರೂಢಿಕರಣ ಮಾಡುತ್ತಿದ್ದಾರೆ. ದೇಶದ ರಾಜಕೀಯದಲ್ಲಿ ಮುಸ್ಲಿಮರ ಸ್ಥಾನ ಎಲ್ಲಿದೆ? ಅಂತ ಮೋದಿ ತೋರಿಸಿದ್ದಾರೆ. ಈ ಮೂಲಕ ಮುಸ್ಲಿಮರಿಗೆ ಸಂದೇಶ ರವಾನಿಸಿದ್ದಾರೆ ಎಂದು ಪ್ರಧಾನಿ ಮೋದಿ ವಿರುದ್ಧ ಗುಡುಗಿದ್ದಾರೆ.

RELATED ARTICLES

Related Articles

TRENDING ARTICLES