ಮಂಡ್ಯ : ನಾನು ಪದೇ ಪದೆ ಅಮೆರಿಕಾಗೆ ಹೋಗಿ ತಪ್ಪು ಮಾಡುತ್ತಿದ್ದೇನೆ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣಯ್ಯ ಬೇಸರಿಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನನ್ನ ಸಮಸ್ಯೆಗಳು ಇದೆ ಪರಿಹಾರ ಮಾಡಲು ಹೋಗ್ತಿದ್ದಿನಿ ಅಷ್ಟೇ.. ನನ್ನ ಹೆಂಡತಿ-ಮಕ್ಕಳು ಇದ್ದಾರೆ ಸರಿ ಪಡಿಸಿಕೊಳ್ತೇನೆ. ಆದರೆ, ನಾನು ಹೋಗ್ತಿರುವುದು ತಪ್ಪೇ, ಸರಿ ಅಂತ ಒಪ್ಪಿಕೊಳ್ಳಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ನಾನು ಈಗಾಗಲೇ ನನ್ನ ಕಂಪನಿಗಳನ್ನ ಮಾರಾಟ ಮಾಡಿದ್ದೇನೆ. ಮೇ 21, 2021ರಲ್ಲಿ ಮಾರಾಟವಾಗಿದೆ, ಗೂಗಲ್ ನಲ್ಲಿ ಚೆಕ್ ಮಾಡಿ. ಅದಕ್ಕೂ ನನಗೂ ಸಂಬಂಧ ಇಲ್ಲ. ಮೈಸೂರಿನಲ್ಲೂ ಸಹ ನನ್ನ ಆಫೀಸ್ ಇತ್ತು, ಅದರ ಮಾಲೀಕರ ಹೆಸರು ಕೂಡ ಬೇರೆ ಇದೆ. ಸಣ್ಣಪುಟ್ಟ ವ್ಯತ್ಯಾಸಗಳನ್ನು ನಾನು ಸರಿಪಡಿಸಿಕೊಳ್ತೇನೆ ಎಂದು ಹೇಳಿದ್ದಾರೆ.
ಫೋನ್ ಮಾಡಿ ಹೇಳಿದ್ರೆ ಕೆಲಸ ಆಗೋದು
ನನ್ನ ಟೀಂ ಇದೆ, ಇಲ್ಲಿ ಜನರ ಕೆಲಸ ಮಾಡುತ್ತಿದ್ದಾರೆ. ನಾವು ಇಲ್ಲಿಯವರೆಗೆ ಬ್ಯಾಂಡೆಡ್ ಹಾಕಿಕೊಂಡು ಬರ್ತಿದ್ದೇವೆ. ಕ್ಷೇತ್ರದಲ್ಲಿ ಫೋನ್ ಮಾಡಿ ಹೇಳಿದ್ರೆ ಮಾತ್ರ ಯಾವುದಾದರೂ ಕೆಲಸ ಆಗೋದು. ನಮ್ಮ ಕ್ಷೇತ್ರದಲ್ಲಿ 5 ರಿಂದ 10 ಸಾವಿರ ಜನಕ್ಕೆ ಕೆಲಸ ಮಾಡಿಕೊಡಲು ಅಷ್ಟೇ ಸಾಧ್ಯ ಎಂದು ತಿಳಿಸಿದ್ದಾರೆ.
ಜನ ಸರ್ಕಾರಿ ಕಚೇರಿ ಬಳಿಗೆ ಹೋಗಬೇಕು
ಜನರು ಸಮಸ್ಯೆ ಹೇಳ್ತಾರೆ, ನಾನು ಅಧಿಕಾರಿಗೆ ಹೇಳಿ ಮಾಡ್ತೇನೆ ಅಷ್ಟೇ.. ಜನರ ಸಮಸ್ಯೆಗಳು ಬೇಗ ಪರಿಹಾರ ಆಗಬೇಕು. ಶಾಸಕರ ಬಳಿ ಬರುವುದಕ್ಕಿಂತ ಸರ್ಕಾರಿ ಕಚೇರಿ ಬಳಿಗೆ ಹೋಗಬೇಕು. ಸಿಸ್ಟಂ ಬದಲಾವಣೆಯಾಗಬೇಕು ಎಂದು ಶಾಸಕ ದರ್ಶನ್ ಪುಟ್ಟಣಯ್ಯ ಹೇಳಿದ್ದಾರೆ.