Monday, December 23, 2024

ಬಾಂಗ್ಲಾ ವಿರುದ್ಧದ ಮೊದಲ ಪಂದ್ಯದಲ್ಲೇ ಭಾರತಕ್ಕೆ ದೊಡ್ಡ ಗೆಲುವು

ಬೆಂಗಳೂರು : ಅಂಡರ್​-19 ವಿಶ್ವಕಪ್​ ಟೂರ್ನಿಯ ಮೊದಲ ಪಂದ್ಯದಲ್ಲೇ ಭಾರತದ ಯುವ ಸಿಂಹಗಳು ಬಾಂಗ್ಲಾ ಹುಲಿಗಳನ್ನು ಬಗ್ಗು ಬಡಿದಿದ್ದಾರೆ.

ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 84 ರನ್​ಗಳ ಬೃಹತ್ ಗೆಲುವು ದಾಖಲಿಸಿದೆ. ಈ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾ ಲೆಕ್ಕಾಚಾರವನ್ನು ಭಾರತ ಉಲ್ಟಾ ಮಾಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 251 ರನ್​ ಕಲೆಹಾಕಿತು. ಭಾರತದ ಪರ ಆದರ್ಶ್​ ದಿಂಗ್ 76, ನಾಯಕ ಉದಯ್ ಸಹರನ್ 64 ರನ್​ ಸಿಡಿಸಿ ಮಿಂಚಿದರು.

252 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಬಾಂಗ್ಲಾದೇಶ ಭಾರತ ಆರಂಭದಲ್ಲೇ ಶಾಕ್ ಮೇಲೆ ಶಾಕ್ ನೀಡಿತು. ಸೌಮಿ ಪಾಂಡೆ ಹಾಗೂ ಮುಶೀರ್ ಖಾನ್ ಶಿಸ್ತುಬದ್ಧ ದಾಳಿಗೆ ಬಾಂಗ್ಲಾ ಹುಲಿಗಳು ಪೆವಿಲಿಯನ್ ಪೆರೇಡ್ ನಡೆಸಿದರು. ಪರಿಣಾಮ, ಬಾಂಗ್ಲಾದೇಶ 167 ರನ್​ಗಳಿಗೆ ಆಲೌಟ್​ ಆಯಿತು. ಬಾಂಗ್ಲಾ ಪರ ಮೊಹಮ್ಮದ್ ಶಿಹಾಬ್ ಜೇಮ್ಸ್ 54, ಅರಿಫುಲ್ ಇಸ್ಲಾಂ 41 ರನ್ ಗಳಿಸಿದರು. ಭಾರತದ ಪರ ಸೌಮಿ ಪಾಂಡೆ 4 ಹಾಗೂ ಮುಶೀರ್ ಖಾನ್ 2 ವಿಕೆಟ್ ಪಡೆದು ಮಿಂಚಿದರು. ಆದರ್ಶ್ ದಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

RELATED ARTICLES

Related Articles

TRENDING ARTICLES