Tuesday, November 5, 2024

ಅಯೋಧ್ಯೆಗೆ ಹೋದ್ರೆ ಅಲ್ಪಸಂಖ್ಯಾತರ ಮನಸ್ಸಿಗೆ ನೋವಾಗುತ್ತೆ : ಬಿ.ವೈ. ವಿಜಯೇಂದ್ರ

ಬೆಂಗಳೂರು : ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಹೋದರೆ ಅಲ್ಪಸಂಖ್ಯಾತರ ಮನಸ್ಸಿಗೆ ನೋವಾಗುತ್ತೆ ಎಂಬ ಭಾವನೆ ಕಾಂಗ್ರೆಸ್ ನವರದ್ದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕುಟುಕಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ದ್ವಂದ್ವ ನಿಲುವಿನಲ್ಲಿದೆ ಎಂದು ಛೇಡಿಸಿದ್ದಾರೆ.

ರಾಮಮಂದಿರದ ಮನು ನಿರ್ಮಾಣಕ್ಕೆ ಸಾಕ್ಷಿಯಾಗಿದೆ. ಅಯೋಧ್ಯೆ ರಾಮಂದಿರ ನಿರ್ಮಾಣ ಜೊತೆಯಲ್ಲಿ, ಉಜ್ಜಯಿನಿ ಕಾರಿಡಾರ್, ನಮಾಮಿ ಉಪಗಂಗೆ ಪುನರುಜ್ಜೀವನ ಗೊಳಿಸೋ ಕೆಲಸ ಮಾಡಲಾಗ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿತ್ವ ಸಂತೋಷ ತಂದಿದೆ ಎಂದು ಹೇಳಿದ್ದಾರೆ.

ಎಲ್ಲದರಲ್ಲೂ ರಾಜಕಾರಣ ಮಾಡ್ತಿದ್ದಾರೆ

ದೇಶದಲ್ಲಿ ರಾಮ‌ಜಪ ನಡೆಯುತ್ತಿದೆ. ಕರ್ನಾಟಕದಲ್ಲಿ ಶ್ರೀಕಾಂತ್ ಪೂಜಾರಿಯನ್ನ ದುರುದ್ದೇಶ ಪೂರಕವಾಗಿ ಬಂಧನ ಮಾಡಲಾಗಿತ್ತು. ರಾಮಜಪದಲ್ಲಿ ದೇಶ ತೊಡಗಿದೆ, ಅದನ್ನ ಗೊಂದಲ ಮೂಡಿಸೋ ಕೆಲಸ‌ ಮಾಡಿದ್ದಾರೆ. ರಾಮಮಂದಿರ ಉದ್ಘಾಟನೆ ಆಹ್ವಾನ ತಿರಸ್ಕರಿಸೋ ಕೆಲಸ ಮಾಡಿದ್ದಾರೆ. ಕಾಂಗ್ರೆಸ್​ ಎಲ್ಲದರಲ್ಲೂ ರಾಜಕಾರಣ ಹುಡುಕುವ ಕೆಲಸ ಮಾಡ್ತಿದೆ ಎಂದು ಬೇಸರಿಸಿದ್ದಾರೆ.

ಬಿ.ಕೆ. ಹರಿಪ್ರಸಾದ್‌ ಸಾಮಾನ್ಯ ವ್ಯಕ್ತಿ ಅಲ್ಲ

ಹರಿಪ್ರಸಾದ್‌ ಹೇಳಿಕೆ‌ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಪಕ್ಷದಲ್ಲಿದೆ. ಬಿ.ಕೆ‌. ಹರಿಪ್ರಸಾದ್‌ ಸಾಮಾನ್ಯ ವ್ಯಕ್ತಿ ಅಲ್ಲ. ಸರ್ಕಾರವೇ ಇದನ್ನ ಪರಿಶೀಲಿಸಬೇಕು. ಸರ್ಕಾರ ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಬೇಕು. ರಾಮಭಕ್ತರ ಮನಸ್ಸಿಗೆ ನೋವಾಗದಂತೆ ನೋಡಿಕೊಳ್ಳಬೇಕು ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.

RELATED ARTICLES

Related Articles

TRENDING ARTICLES