ಬೆಂಗಳೂರು : ನನ್ನ ತಾಯಿ ಲೀಲಾವತಿಯವರ ಸ್ಮಾರಕವನ್ನು ನನ್ನ ಸ್ವತಃ ಖರ್ಚಿನಲ್ಲೇ ಮಾಡುತ್ತೇನೆ. ಜನರ ಮೇಲೆ ಬಾರ ಹಾಕಲ್ಲ, ರಾಜ್ಯ ಸರ್ಕಾರಕ್ಕೂ ನಾವು ಹಿಂಸೆ ಕೊಡಬಾರದು ಎಂದು ನಟ ವಿನೋದ್ ರಾಜ್ ಹೇಳಿದ್ದಾರೆ.
ಲೀಲಾವತಿ ಸ್ಮಾರಕ ಸ್ಥಾಪನೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ವತಃ ಹಣದಲ್ಲಿ ಸ್ಮಾರಕ ಮಾಡುತ್ತೇನೆ. ಸ್ಮಾರಕ ನಿರ್ಮಾಣ ಸಂಬಂಧ ಆದಾಯ ತೆರಿಗೆ ಎಷ್ಟು ಕಟ್ಟಬೇಕು ಅದನ್ನು ಕಟ್ಟುತ್ತೇನೆ ಎಂದು ತಿಳಿಸಿದ್ದಾರೆ.
ನಮ್ಮ ಜಾಗಕ್ಕೆ ಸಮಸ್ಯೆ ಆಗ್ತಿಲ್ಲ. ಆದರೆ, ನನಗೆ ನೋವು ಆಗ್ತಿದೆ. ಸರ್ಕಾರ ಇದರ ಬಗ್ಗೆ ಎಚ್ಚೆತ್ತುಕೊಳ್ಳಬೇಕು. 10 ವರ್ಷದ ಹಿಂದೆ ಟಿ.ಬಿ ಜಯಚಂದ್ರ ಅವರು ರೈತರನ್ನು ಒಕ್ಕಲೆಬ್ಬಿಸಬಾರದು ಅಂತ ಹೇಳಿದ್ರು. ಅರಣ್ಯ ಇಲಾಖೆ ಯೋಚನೆ ಮಾಡಿ ನಿರ್ಧಾರ ಮಾಡಬೇಕು. ನೀವು ಒಳ್ಳೆಯ ಕೆಲಸ ಮಾಡಿದ್ರೆ ನಿಮ್ಮನ್ನು ರೈತರು ಕೈ ಬಿಡಲ್ಲ ಎಂದು ಹೇಳಿದ್ದಾರೆ.
ನಿಮ್ಮನ್ನು ಒಕ್ಕಲೆಬ್ಬಿಸಿದ್ರೆ ಸುಮ್ನೆ ಬಿಡ್ತೀರಾ..?
ಸಚಿವ ಈಶ್ವರ್ ಖಂಡ್ರೆ ಅವರನ್ನು ಭೇಟಿ ಆಗುತ್ತೇವೆ, ಅವರು ಅರ್ಥ ಮಾಡಿಕೊಳ್ಳಬೇಕು. ನಿಮಗೆ ಸರ್ಕಾರದಲ್ಲಿ ಒಂದು ಪದವಿ ಇದೆ. ಎಲ್ಲರನ್ನೂ ಒಕ್ಕಲೆಬ್ಬಿಸಿ ಕರ್ತವ್ಯ ಮುಗಿತು ಅಂತ ಹೇಳಬಾರದು. ನಿಮ್ಮ ಮನೆಯಿಂದ ನಿಮ್ಮನ್ನು ಒಕ್ಕಲೆಬ್ಬಿಸಿದ್ರೆ ಸುಮ್ಮನೆ ಬಿಡ್ತೀರಾ..? ಯಾರಾದರೂ ಪಾಪದವರು ಇದ್ರೆ ಒಕ್ಕಲೆಬ್ಬಿಸ್ತೀರಾ..? ಎಂದು ಅರಣ್ಯ ಸಚಿವರ ಮೇಲೆ ನಟ ವಿನೋದ್ ರಾಜ್ ಅಸಮಾಧಾನ ವ್ಯಕ್ತಪಡಿಸಿದರು.