Wednesday, January 22, 2025

ಗೊಂಬೆಯನ್ನು ದೇವರೆಂದು ಹೇಳಿದ್ರೆ ತಪ್ಪೇನು?: ಸಚಿವ ಕೆ.ಎನ್​ ರಾಜಣ್ಣ ಪ್ರಶ್ನೆ

ತುಮಕೂರು: ರಾಮನ ಕುರಿತ ಅವಹೇಳನಕಾರಿ ಹೇಳಿಕೆ ವಿಚಾರವಾಗಿ ಸಹಕಾರಿ ಸಚಿವ ​ಕೆ ಎನ್​ ರಾಜಣ್ಣ  ಸ್ಪಷ್ಟಣೆ ನೀಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಬಾಬ್ರಿ ಮಸೀದಿ ದ್ವಂಸ ಮಾಡಿದಾಗ, ನಾನು ಭೇಟಿ ಕೊಟ್ಟಾಗ ನಾನು ಕಂಡ ಚಿತ್ರಣವನ್ನೂ ಅವತ್ತು ಹೇಳಿಕೊಂಡಿದ್ದೇನೆ ಅಷ್ಟೇ. ಬೊಂಬೆಯನ್ನ ದೇವರು ಅಂತಾ ಹೇಳಿದ್ರೆ ಏನೂ ತಪ್ಪು. ಬೊಂಬೆಯಲ್ಲಿ ದೈವತ್ವ ಇರೋದಿಲ್ವಾ ಎಂದಿದ್ದಾರೆ.

ಬೊಂಬೆ ಅನ್ನೋ ಕಾರಣಕ್ಕೆ ತಿರಸ್ಕಾರ ಮನೋಭಾವದಿಂದ ಇವರು ಮಾತನಾಡತಾರಲ್ಲ ಅದು ಸರಿನಾ. ಟೂರಿಂಗ್ ಟಾಕೀಸ್ ರೀತಿಯೇ ಇತ್ತು ಅವತ್ತು ಅಲ್ಲಿ. ಅದಕ್ಕೆ ಹೇಳಿದ್ದೇನೆ ನಾನು. ಅದನ್ನ ಬಿಟ್ಟು ದೇವರನ್ನೇ ಟೂರಿಂಗ್ ಟಾಕೀಸ್ ಅಂದಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿಯವರು ನನಗೆ ರಾವಣ ಎಂದಿದ್ದಾರೆ

ನನಗೆ ರಾವಣ ಎಂದಿದ್ದಾರೆ ನನಗೆ ಬೇಜಾರಿಲ್ಲ, ರಾವಣ ಎಂದು ಅನಿಸಿಕೊಳ್ಳಲು ನಾನು ಸಿದ್ಧನಿದ್ದೇನೆ. ಅವನಂತ ಧೈವ ಭಕ್ತ ಯಾರೂ ಇರಲಿಲ್ಲ. ಇವರೆಲ್ಲ ಡೋಂಗಿ ದೈವ ಭಕ್ತರು. ಹಿಂದೆ ಅಣ್ಣಾದೋರೈ ರಾಮಾಯಣಕ್ಕೆ ಬದಲಾಗಿ ರಾವರಣಾವಣ ನಾಟಕ ಆಡಿದ್ರು. ಈ ನಾಟಕದಲ್ಲಿ ರಾವಣ ಸೀತೆ ಮೇಲೆ ಬಲಾತ್ಕಾರ ಮಾಡೋದಿಲ್ಲ. ಇದು ರಾವಣನ ದೊಡ್ಡ ಗುಣ ಅಲ್ವೇ ಎಂದು ರಾಜಣ್ಣ ಹೇಳಿದ್ದಾರೆ

ನಾನು ರಾಮ ಮತ್ತು ರಾವಣ ಇಬ್ಬರ ಪರ ಇದ್ದೇನೆ. ನನ್ನ ಹೇಳಿಕೆಯನ್ನ ನಾನು ಸಮರ್ಥನೆ ಮಾಡಿಕೊಳ್ತೇನೆ. ಹೇಳಿಕೆಯಿಂದ ಹಿಂದೆ ಸರಿಯೋ ಪ್ರಶ್ನೆಯೇ ಇಲ್ಲ. ರಾವಣ ಶಿವನ ಪರಮಭಕ್ತ. ರಾವಣನಿಗೆ ಶಿವ ಆತ್ಮಲಿಂಗ ಕೊಟ್ಟಿರೋದು ಎಂದಿದ್ದಾರೆ.

ಲೋಕಸಭೆ ಟಿಕೆಟ್

ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್ ಲೋಕಸಭೆ ಟಿಕೆಟ್ ಸಂಬಂಧ ಪಟ್ಟಂತೆ ಅಭಿಪ್ರಾಯ ಸಂಗ್ರಹಿಸಲು ಆಗಮಿಸಿದ್ದಾರೆ.ಮುದ್ದಾಹನುಮೇಗೌಡರು ಕಾಂಗ್ರೆಸ್ ಗೆ ತುಂಬಾ ಸನಿಹ ಬಂದಿದ್ದಾರೆ. ಅವರು ಯಾವುದೇ ಸಂದರ್ಭದಲ್ಲಿ ಬೇಕಾದರೂ ಪಕ್ಷಕ್ಕೆ ಸೇರ್ಪಡೆಯಾಗಬಹುದು. ಟಿಕೆಟ್ ಕೊಡೋ ವಿಚಾರದಲ್ಲಿ ನನ್ನ ಅಭಿಪ್ರಾಯ ಏನೂ ಇಲ್ಲ. ಅದು ಹೈ ಕಮಾಂಡ್ ಗೆ ಬಿಟ್ಟ ವಿಚಾರ ಎಂದಿದ್ದಾರೆ.

 

 

RELATED ARTICLES

Related Articles

TRENDING ARTICLES