Tuesday, December 3, 2024

ಮುಸ್ಲಿಂ ಮಹಿಳೆಯರಿಗೆ ರಾಮಮಂದಿರ ಉದ್ಘಾಟನೆಯ ಆಹ್ವಾನಪತ್ರಿಕೆ ನೀಡಿದ ರಾಮಭಕ್ತರು!

ದಾವಣಗೆರೆ: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ ನಡೆಯುತ್ತಿದ್ದು ಈ ಹಿನ್ನೆಲೆ ದೇಶದ ಹಲವೆಡೆ ಸೇರಿದಂತೆ ರಾಜ್ಯದಲ್ಲೂ ಮಂತ್ರಾಕ್ಷತೆ ಹಾಗು ಆಮಂತ್ರಣ ಪತ್ರಿಕೆ ನೀಡಲಾಗುತ್ತಿದೆ. ಈ ನಡುವೆ ದಾವಣಗೆರೆಯೂ ಎರಡು ಧರ್ಮಗಳ ಭಾವೈಕ್ಯತೆಗೆ ಸಾಕ್ಷಿಯಾಗಿದೆ.

ಜಿಲ್ಲೆಯ ಹರಿಹರ ತಾಲೂಕಿನ ಕಡರನಾಯಕನಹಳ್ಳಿಯಲ್ಲಿನ ಪ್ರತಿ ಮುಸ್ಲಿಂ ಮನೆಗಳಿಗೆ ಹಿಂದು ಮಹಿಳೆಯರು ತೆರಳಿ ರಾಮನ ಮಂತ್ರಾಕ್ಷಾತೆ ಹಾಗು ಆಮಂತ್ರಣ ಪತ್ರಿಕೆ ರಾಮನ ಭಾವಚಿತ್ರವನ್ನು ನೀಡುತ್ತಿದ್ದಾರೆ, ಇನ್ನು ಹಿಂದು ಧರ್ಮದ ಮಹಿಳೆಯರು ನೀಡಿದ ಮಂತ್ರಾಕ್ಷತೆ ಹಾಗು ಆಮಂತ್ರಣವನ್ನು ಅಷ್ಟೆ ವಿನಯ ಪೂರ್ವಕವಾಗಿ ಸ್ವೀಕರಿಸುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.

ಇದನ್ನೂ ಓದಿ: ಪುಣೆಯ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಶಿಕ್ಷಕರು!

ಕಳೆದ‌ ಒಂದು ವಾರದಿಂದ ಈ ಗ್ರಾಮದಲ್ಲಿ ಎಲ್ಲಾ ಮನೆಗಳಿಗೂ ಭೇಟಿ ನೀಡುತ್ತಿರುವ ರಾಮಭಕ್ತರು ವಿಶೇಷವಾಗಿ ಮಂತ್ರಾಕ್ಷತೆ ಪೋಟೋ ಜೊತೆಗೆ ಹರಿಶಿಣ ಕುಂಕುವ ಬಳೆಗಳನ್ನು ನೀಡುತ್ತಿದ್ದಾರೆ, ಇವರು ನೀಡುತ್ತಿರುವ ಮಂತ್ರಾಕ್ಷತೆ ಸ್ವೀಕರಿಸಿದ ಮುಸ್ಲಿಂ ಮಹಿಳೆಯರು ರಾಮಭಕ್ತರ ಬಾಯಿಗೆ ಸಕ್ಕರೆ ಹಾಕಿ ನೀರು ಕೊಟ್ಟು ಸತ್ಕರಿಸುತ್ತಿದ್ದಾರೆ.

ಜನವರಿ 22 ರಂದು ರಾಮಮಂದಿರ ಉದ್ಘಾಟನೆಗೆ ಕಾರ್ಯಕ್ರಮ ನಡೆಯಲಿದ್ದು  ಮಂದಿರ ಉದ್ಘಾಟನೆ ದಿನ ಗ್ರಾಮದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಳ್ಳಲಾಗಿದ್ದು ಎಲ್ಲರೂ ಭಾಗವಹಿಸುವ ಮೂಲಕ ಭಾವನಾತ್ಮಕವಾಗಿ ಭಾವೈಕ್ಯತೆಗೆ ಸಾಕ್ಷಿಯಾಗಲು ಸಿದ್ದರಾಗಿದ್ದಾರೆ.

RELATED ARTICLES

Related Articles

TRENDING ARTICLES