Sunday, May 25, 2025

ರಾಮನ ಬಂಟ ಹನುಮಂತನಿಗೆ 1008 ಕೆಜಿ ಜೇನಿನ ಅಭಿಷೇಕ!

ಮಂಡ್ಯ: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಜ.22 ಕ್ಕೆ ನಡೆಯಲಿದೆ. ಈ ಹಿನ್ನೆಲೇಯಲ್ಲಿ ಬೆಂಗಳೂರು ಮೂಲದ ದಂಪತಿ ಮಂಡ್ಯ ಜಿಲ್ಲೆಯ ಮದ್ದೂರಿನ ಹೊಳೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ರಾಮನ ಬಂಟ ಹನುಮಂತನಿಗೆ 1008 ಕೆಜಿ ಜೇನಿನ ಅಭಿಷೇಕ ಮಾಡುತ್ತಿದ್ದಾರೆ.

ಹೌದು,ಬೆಂಗಳೂರು ಮೂಲದ ಶ್ರೀನಿಧಿ, ಶೃತಿ ದಂಪತಿಗಳಿಂದ ಅಭಿಷೇಕದ ಸೇವೆ ಮಾಡುತ್ತಿದ್ದಾರೆ. ರಾಮ ಮಂದಿರ ಉದ್ಘಾಟನೆ ನಿರ್ವಿಘ್ನವಾಗಿ ನೆರವೇರಬೇಕು. ಸಮಸ್ತ ಹಿಂದೂಗಳಿಗೆ ಒಳಿತಾಗಬೇಕೆಂದು ಅಭಿಷೇಕ ಮಾಡುತ್ತಿದ್ದಾರೆ.

ಇದನ್ನೂ ಓದಿ: ನಾಲಿಗೆಯಿಂದ ಮೂಡಿದ ಶ್ರೀರಾಮ  

ಹೊಳೆ ಆಂಜನೇಯಸ್ವಾಮಿಗೆ 1008 ಕೆಜಿ ಜೇನಿನಿಂದ ಅಭಿಷೇಕ ನಡೆಯುತ್ತಿದೆ. ರಾಮಮಂದಿರವನ್ನ ರಾಮನ ಬಂಟ ಹನುಮಂತ ಕಾಯಲಿ ಎಂದು ಅಭಿಷೇಕ ಮಾಡಲಾಗುತ್ತಿದೆ. ಮಂತ್ರಘೋಷದೊಂದಿಗೆ ವಿಶೇಷ ಪೂಜೆ, ಅಭಿಷೇಕ ನಡೆಯುತ್ತಿದೆ.

 

RELATED ARTICLES

Related Articles

TRENDING ARTICLES