Wednesday, January 22, 2025

ಬೆಂಗಳೂರಿನಲ್ಲಿ ಹೆಣ್ಮಕ್ಕಳಿಗಿಲ್ಲ ಸೇಫ್ಟಿ; ಬೇಕಂತಲೆ ಯುವತಿಗೆ ಟಚ್‌ ಮಾಡುತ್ತಿದ್ದ ಕಾಮುಕರು

ಬೆಂಗಳೂರು: ಬಿಎಂಟಿಸಿ ಬಸ್, ಮೆಟ್ರೋ, ಮಾಲ್​ಗಳಲ್ಲಿ ಹೆಣ್ಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸುವ ಕಾಮುಕರಿಗೆ ಕಡಿವಾಣ ಹಾಕುವರೇ ಇಲ್ಲದಂತೆ ಆಗಿದೆ ಈ ಸಿಲಿಕಾನ್​ ಸಿಟಿಯಲ್ಲಿ. 

ಹೌದು, ಹೆಣ್ಮಕ್ಕಳನ್ನ ಟಚ್ ಮಾಡಿ ವಿಕೃತ ಸುಖ ಅನುಭವಿಸುತ್ತಿದ್ದ ಕಾಮುಕರ ನೀಚ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹೋಟೆಲ್ ಬಳಿ ನಿಂತಿದ್ದ ಯುವತಿಗೆ ಬೇಕು ಬೇಕಂತಲೇ ವಿಕೃತವಾಗಿ ಸ್ಪರ್ಶಿಸಿ ಲೈಂಗಿಕ‌ ಕಿರುಕುಳ ನೀಡಿದ ಘಟನೆ ವರದಿಯಾಗಿದೆ. ಕಾಮುಕನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಜಯನಗರದ ನಮ್ಮೂಟ ಹೋಟೆಲ್ ಬಳಿ ಈ ಘಟನೆ ನಡೆದಿದೆ.

ಜನಜಂಗುಳಿ ಮಧ್ಯೆಯೇ ಯಾರ ಭಯವು ಇಲ್ಲದೇ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಹಿಂದೊಮ್ಮೆ ನಮ್ಮ ಮೆಟ್ರೋ ರೈಲಿನಲ್ಲಿ ಯುವತಿಯರಿಗೆ ಬೇಕಂತೆ ಸ್ಪರ್ಶಿಸಿ ವಿಕೃತಿ ಮೆರೆಯುತ್ತಿದ್ದರು. ಇದೀಗ ಹೋಟೆಲ್‌ ಬಳಿ ನಿಂತಿದ್ದ ಯುವತಿಗೆ ಹಿಂದಿನಿಂದ ಬಂದ ಯುವಕನೊಬ್ಬ ಟಚ್‌ ಮಾಡಿ, ಕಿರುಕುಳ ನೀಡಿದ್ದಾನೆ.

ಯುವತಿಯೊಬ್ಬಳು ತನ್ನ ಸ್ನೇಹಿತೆಯೊಂದಿಗೆ ತಿಂಡಿ ಪಾಸರ್ಲ್‌ ಪಡೆಯಲು ನಿಂತಿದ್ದಳು. ಈ ವೇಳೆ ಅಲ್ಲಿಗೆ ಬಂದಿದ್ದ ಮೂವರು ಪುಂಡರು, ಕೀಟಲೆ ಮಾಡುವ ಶುರು ಮಾಡಿದ್ದರು.

ಇದನ್ನೂ ಓದಿ: ನಾನು ಕೇಂದ್ರ ಸಚಿವನಾಗುವ ಸುದ್ದಿ ಎಲ್ಲಿ ಹುಟ್ಟಿತು ಎಂಬುದು ನನಗೆ ಯಕ್ಷಪ್ರಶ್ನೆ: HDK

ಯುವತಿ ನಿಂತಿದ್ದನ್ನು ಗಮನಿಸಿದ ಯುವಕರು ಕೀಟಲೆ ಮಾಡುವ ಉದ್ದೇಶದಿಂದ ಪ್ಲ್ಯಾನ್‌ ಮಾಡಿಕೊಂಡು ಯುವತಿಯನ್ನು ಟಚ್‌ ಮಾಡಿದ್ದಾನೆ. ಫೋನ್‌ನಲ್ಲಿ ಮಾತಾಡುತ್ತಿದ್ದ ಯುವತಿಗೆ ಹಿಂದಿನಿಂದ ಬಂದ ಕಾಮುಕ ಬೇಕು ಬೇಕಂತಲೇ ಟಚ್‌ ಮಾಡಿದ್ದಾನೆ. ಯುವಕನಿಂದ ಸ್ಪರ್ಶಿಸುತ್ತಿದ್ದಂತೆ ಯುವತಿ ಬೆಚ್ಚಿದ್ದಾಳೆ, ನಂತರ ಪ್ರಶ್ನಿಸಲು ಮುಂದಾಗಿದ್ದಾಳೆ. ತಮ್ಮದೇನು ತಪ್ಪೇ ಇಲ್ಲ ಎಂಬಂತೆ ವಾದ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಸಿಸಿಟಿವಿಯಲ್ಲಿ ಸಂಪೂರ್ಣ ದೃಶ್ಯ ಸೆರೆಯಾಗಿದೆ. ಹೋಟೆಲ್‌ಗೆ ಬಂದಿದ್ದ ಮೂವರು ಯುವಕರ ಪೈಕಿ, ಒಬ್ಬ ಮೊಬೈಲ್‌ನಲ್ಲಿ ಮುಳುಗಿದ್ದ. ಮತ್ತಿಬ್ಬರು ಕುಚೇಷ್ಠೆಗೆ ಮುಂದಾಗಿದ್ದರು. ಯುವತಿಗೆ ಕಿರುಕುಳ ಕೊಡುವ ಉದ್ದೇಶದಿಂದಲೇ ಯುವತಿಯನ್ನು ನೋಡಿಕೊಂಡು ತನ್ನ ಸ್ನೇಹಿತನೊಂದಿಗೆ ಕಿವಿಯಲ್ಲಿ ಏನೋ ಗುಟ್ಟಾಗಿ ಮಾತನಾಡಿಕೊಳ್ಳುತ್ತಾನೆ.

ಪರಸ್ಪರ ಇಬ್ಬರು ಗುಟ್ಟು ಗುಟ್ಟಾಗಿ ಮಾತಾಡಿಕೊಂಡ ಬಳಿಕ ಕೂದಲು ಹೇರ್‌ ಸ್ಟೈಲ್‌ ಮಾಡಿಕೊಂಡು ಯುವತಿ ಬಳಿ ಹೋಗಿದ್ದಾನೆ. ಯಾವುದೋ ತಿಂಡಿ ಆರ್ಡರ್‌ ಮಾಡುವಂತೆ ಹೋಗಿ ಯುವತಿಯ ಹಿಂಭಾಗವನ್ನು ಸ್ಪರ್ಶಿಸಿದ್ದಾನೆ. ಒಬ್ಬ ಯುವಕ ಯುವತಿಯನ್ನು ಬೇಕಂತಲೇ ಟಚ್‌ ಮಾಡಿ ವಿಕೃತ ಮೆರೆದಿದ್ದರೆ, ಮತ್ತೊಬ್ಬ ದೂರದಿಂದಲೇ ಇದೆಲ್ಲವನ್ನೂ ಕಂಡು ವಿಕೃತ ಸುಖ ಪಡೆಯುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸದ್ಯ ಘಟನೆ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್ಐಆರ್ ದಾಖಲಾಗಿದೆ. ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಹುಡುಕಾಟವನ್ನು ನಡೆಸಿದ್ದಾರೆ.

 

RELATED ARTICLES

Related Articles

TRENDING ARTICLES