Wednesday, January 22, 2025

ಕಾಂಗ್ರೆಸ್ ಸರ್ಕಾರ ಬಹಳ ದಿನ ನಡೆಯಲ್ಲ : ಶೋಭಾ ಕರಂದ್ಲಾಜೆ

ಉಡುಪಿ : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪೂರ್ಣಾವಧಿ ಸಿಎಂ ಚರ್ಚೆ ವಿಚಾರದ ಬಗ್ಗೆ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್​ನ ಹಲವಾರು ಗೆಳೆಯರು ಸರ್ಕಾರ ಬಹಳ ದಿನ ನಡೆಯುವುದಿಲ್ಲ ಎಂದು ಹೇಳಿದ್ದಾರೆ. ಕಾದು ನೋಡೋಣ ಏನೇನಾಗುತ್ತೆ ಅಂತ ಎಂದು ಕುಟುಕಿದ್ದಾರೆ.

ಕಾಂಗ್ರೆಸ್​ ಸರ್ಕಾರ ಆರಂಭವಾದ ಮೊದಲ ದಿನದಿಂದಲೇ ಗೊಂದಲ ಇದೆ. ಸಿಎಂ, ಡಿಸಿಎಂ, ಸಚಿವರು ಹಾಗೂ ಶಾಸಕರ ನಡುವೆ ಗೊಂದಲವಿದೆ. ಗುಂಪುಗಳಾಗಿ ಬೇರೆ ಬೇರೆ ಕಡೆ ಸೇರಲು ರೆಸಾರ್ಟ್ ರಾಜಕೀಯ ಮಾಡಲು ವಿದೇಶಕ್ಕೆ ಹೋಗಲು ಯೋಚನೆ ಮಾಡ್ತಿವೆ ಎಂದು ಲೇವಡಿ ಮಾಡಿದ್ದಾರೆ.

ಅಧಿಕಾರಕ್ಕಾಗಿ ಹೊಡೆದಾಟ ನಡೆಯುತ್ತಿದೆ

ಅಭಿವೃದ್ಧಿ ನಿರ್ಲಕ್ಷ, ಜಾತೀಯ ಕಾರಣದಿಂದ ಹೊಡೆದಾಟಗಳು ನಡೆಯುತ್ತಿರುವುದು ಈ ಆಂತರಿಕ ಬೇಗುದಿಗೆ ಕಾರಣ. ಕಾಂಗ್ರೆಸ್​ನಲ್ಲಿ ಅಧಿಕಾರಕ್ಕಾಗಿ ಹೊಡೆದಾಟ ನಡೆಯುತ್ತಿದೆ. ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್​ನ ಬಿರುಕು ದೊಡ್ಡದಾಗುತ್ತದೆ. ಅದು ಯಾವ ಹಂತಕ್ಕೆ ತಲುಪುತ್ತದೆ ಎಂದು ಕರ್ನಾಟಕ ರಾಜ್ಯದ ಜನ ಊಹೆ ಮಾಡಲು ಕಷ್ಟ ಎಂದು ಶೋಭಾ ಕರಂದ್ಲಾಜೆ ಛೇಡಿಸಿದ್ದಾರೆ.

RELATED ARTICLES

Related Articles

TRENDING ARTICLES