Thursday, November 21, 2024

Republic Day Lalbagh Flower Show: ಇಂದಿನಿಂದ ಲಾಲ್‌ಬಾಗ್​ನಲ್ಲಿ ಫಲಪುಷ್ಪ ಪ್ರದರ್ಶನ; ಹೂವಿನಲ್ಲಿ ಅರಳಲಿರುವ ಬಸವಣ್ಣ

ಬೆಂಗಳೂರು: ಇಂದಿನಿಂದ ವಿಶ್ವವಿಖ್ಯಾತ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ಆರಂಭವಾಗಲಿದೆ. ಗಣರಾಜ್ಯೋತ್ಸವದ ನಿಮಿತ್ತ ನಡೆಯಲಿರುವ ಈ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ. 

ಈ ಪುಷ್ಪ ಪ್ರದರ್ಶನ ಜನವರಿ 28ರವರೆಗೂ ಇರಲಿದೆ. 10 ದಿನಗಳ ಕಾಲ ನಡೆಯಲಿರುವ ಫಲಪುಷ್ಪ ಪ್ರದರ್ಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಜಗಜ್ಯೋತಿ ಬಸವೇಶ್ವರರ ಥೀಮ್‌ನಲ್ಲಿ ಈ ವರ್ಷದ ಫಲಪುಷ್ಪ ಪ್ರದರ್ಶನ ನಡೆಯಲಿದೆ.

ಹೂವಿನಲ್ಲಿ ಅರಳಲಿರುವ ಬಸವಣ್ಣ
ಸಮಾಜ ಸುಧಾರಕ ಬಸವಣ್ಣ, ಅವರ ಪರಂಪರೆ ಮತ್ತು ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆಯನ್ನು ಕೇಂದ್ರೀಕರಿಸಿ ವಿವಿಧ ಹೂವಿನ ಪ್ರತಿಕೃತಿಗಳನ್ನು ರಚಿಸಲಾಗಿದೆ.

ಅನುಭವ ಮಂಟಪದ ವಿಶೇಷ 

ಲಾಲ್‌ಬಾಗ್ ಗಾಜಿನ ಮನೆಗೆ ಪ್ರವೇಶಿಸಿದಾಗ ಮೊದಲು ಬಸವಣ್ಣನವರ ಪ್ರತಿಮೆ ನಿಮಗೆ ಎದುರಾಗಲಿದೆ. ಅನುಭವ ಮಂಟಪದ ಹೂವಿನ ಪ್ರತಿಕೃತಿಯು ಈ ಬಾರಿಯ ವಿಶೇಷತೆಗಳಲ್ಲಿ ಒಂದಾಗಿದೆ.

13.5 ಲಕ್ಷ ಕಟ್ ಫ್ಲವರ್‌ಗಳು

ಗಾಜಿನ ಮನೆಯಲ್ಲಿಯೇ ಒಟ್ಟು 13.5 ಲಕ್ಷ ಕಟ್ ಫ್ಲವರ್‌ಗಳು ಮತ್ತು 9 ಲಕ್ಷ ಕುಂಡದಲ್ಲಿ ಹೂವಿನ ಗಿಡಗಳನ್ನು ಬಳಸಿ ಥೀಮ್ ಬಿಂಬಿಸುವ ವ್ಯವಸ್ಥೆಗಳನ್ನು ರಚಿಸಲಾಗುತ್ತಿದೆ.

 

 

RELATED ARTICLES

Related Articles

TRENDING ARTICLES