ಅಯೋಧ್ಯೆ: ಅಯೋಧ್ಯೆಯಲ್ಲಿ ಶ್ರೀರಾಮೋತ್ಸವ ಸಂಭ್ರಮ ಮನೆಮಾಡಿದೆ. ದೇಶದ ಮೂಲೆ ಮೂಲೆಯಲ್ಲೂ ರಾಮೋತ್ಸವದ ಸಡಗರವಿದ್ದು, ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ವಿಧಿವಿಧಾನಗಳು ನಡೆಯುತ್ತಿವೆ.
ಇಂದು ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯೊಳಗೆ ರಾಮನ ವಿಗ್ರಹವನ್ನು ತರಲಾಗಿದೆ.
ಃವದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕತ್ತಿರುವ ಕಪ್ಪು ಶಿಲೆಯ ಮೂರ್ತಿಯನ್ನು ಗರ್ಭಗುಡಿಯೊಳಗೆ ತರಲಾಗಿದೆ.
150-200 ಕೆ.ಜಿ ತೂಗುವ ಈ ಮೂರ್ತಿಯನ್ನು ಹೂವುಗಳಿಂದ ಅಲಂಕರಿಸಿದ ಟ್ರಕ್ ಮೂಲಕ ಮೆರವಣಿಗೆಯಲ್ಲಿ ದೇಗುಲದ ಆವರಣಕ್ಕೆ ತರಲಾಯಿತು. ದಾರಿ ಮಧ್ಯೆ ಹನುಮಾನ್‌ಗಡಿಯಲ್ಲಿ ಕೆಲ ಹೊತ್ತು ತಂಗಿ, ಮೆರವಣಿಗೆ ಮುಂದುವರಿಯಿತು.
ಇಂದು (ಗುರುವಾರ) ಮೂರ್ತಿಯ ಪ್ರತಿಷ್ಠಾಪನೆ ನಡೆಯುವ ಸಂಭವವಿದೆ ಎಂದು ಮಂದಿರ ನಿರ್ಮಾಣ ಸಮಿತಿಯ ಮುಖ್ಯಸ್ಥ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ.
ಜ.22 ರಂದು ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು, ಜ.23 ರಿಂದ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಲಿದೆ. ಜ.22 ರಂದು ಮಧ್ಯಾಹ್ನ 12.20ರ ವೇಳೆಗೆ ಪ್ರಾಣ ಪ್ರತಿಷ್ಠಾಪನೆಯ ವಿಧಿ ವಿಧಾನಗಳು ಪ್ರಾರಂಭವಾಗಲಿದೆ.