Wednesday, January 22, 2025

ಬೇಡಿಕೆ ಈಡೇರಿಸುವವರೆಗೂ ನಾವು ವಾಹನ ಓಡಿಸಲ್ಲ

ಬಳ್ಳಾರಿ : ಖಾಸಗಿ ಬಸ್ ಚಾಲಕರ ಕ್ಷೇಮಾಭಿವೃದ್ಧಿ ಸಂಘ ಮತ್ತು ಆಲ್ ಇಂಡಿಯಾ ಡ್ರೈವರ್ಸ್ ಹೆಲ್ಪ್ ಲೈನ್ ಸಹಯೋಗದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಚಾಲಕರು ಇಂದು ಕಂಪ್ಲಿ ಪಟ್ಟಣದ ಅಂಬೇಡ್ಕರ್ ಸರ್ಕಲ್ ಬಳಿ ಪ್ರತಿಭಟನೆಯನ್ನು ನಡೆಸಿದರು.

ಚಾಲಕರಿಗೂ ಜೀವನವಿದೆ, ಚಾಲಕರನ್ನು ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಇಕ್ಕಟ್ಟಿಗೆ ಸಿಲುಕಿಸಬೇಡಿ. ಡ್ರೈವರ್ ಗಳಿಗೆ ಎಕ್ಸೇಕ್ ಪ್ರೋಜೆಕ್ಷನ್ ವಿಧಿಸುತ್ತಿರುವ 7 ಲಕ್ಷ ದಂಡ ಹಾಗೂ ಜೈಲು ಶಿಕ್ಷೆಯನ್ನು ನಾವು ಒಪ್ಪಲ್ಲ ವಿರೋಧಿಸುತ್ತೇವೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

ಚಾಲಕರ ಪರವಾಗಿ ಗುರುಸ್ವಾಮಿ ಮಾತನಾಡಿ, ಬ್ಲಾಕ್ ಲೀಸ್ಟ್ ಹೆಸರಲ್ಲಿ ಕಮರ್ಷಿಯಲ್ ವಾಹನಗಳಿಗೆ ಎಫ್.ಸಿ. ಮತ್ತು ಪರ್ಮಿಟ್ ನವೀಕರಣದಲ್ಲಿ ತಾರತಮ್ಯ ಮಾಡುವುದನ್ನು ನಿಲ್ಲಿಸಿ. ಇನ್ನೂ ಪಕ್ಕದ ಗಂಗಾವತಿಯಿಂದ 40 ಕಿಲೋ ಮೀಟರ್ ಒಳಗೆ 4 ಟೋಲ್ ಗಳಿದ್ದು, ಸ್ಥಳೀಯ ಲಾರಿಗಳಿಗೆ ವಿನಾಯಿತಿ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಬೇಡಿಕೆಗಳನ್ನು ಈಡೇರಿಸದಿದ್ರೆ ಉಗ್ರ ಹೋರಾಟ

ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ರೆ ಮುಂದಿನ ದಿನದಲ್ಲಿ ಎಲ್ಲಾ ಖಾಸಗಿ ಲಾರಿ, ಬಸ್ಸು, ಆಟೋ ಮತ್ತಿತರ ಚಾಲಕರು ಒಗ್ಗೂಡಿ ಉಗ್ರ ಹೋರಾಟ ಮಾಡಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

RELATED ARTICLES

Related Articles

TRENDING ARTICLES