Thursday, December 19, 2024

ಆರ್ಭಟಿಸಬೇಕಿದ್ದ ಬಂಡೆ ಸೈಲೆಂಟ್ ಆಗುತ್ತಿದೆ : ಬಿ.ವೈ. ವಿಜಯೇಂದ್ರ

ಬೆಂಗಳೂರು : ಬಂಡೆಯಂತೆ ಆರ್ಭಟಿಸಬೇಕಿದ್ದ ಡಿ.ಕೆ. ಶಿವಕುಮಾರ್ ಸೈಲೆಂಟ್ ಆಗುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕುಟುಕಿದ್ದಾರೆ.

ಕಾಂಗ್ರೆಸ್​ನಲ್ಲಿ ಭುಗಿಲೆದ್ದಿರುವ ಪೂರ್ಣಾವಧಿ ಸಿಎಂ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಡಿ.ಕೆ. ಶಿವಕುಮಾರ್ ಅವರ ಮೆದು ಮಾತುಗಳ ಪ್ರತಿಕ್ರಿಯೆ ಗಮನಿಸಿದರೆ ಅವರಲ್ಲಿ ರಾಜಕೀಯ ಹತಾಶೆ ಮುತ್ತಿದಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಮುಖ್ಯಮಂತ್ರಿ ಎಂದು ಅವರ ಹಿಂಬಾಲಕರ ಮೂಲಕ ಹೇಳಿಸಿ, ಉಪಮುಖ್ಯಮಂತ್ರಿಗಳನ್ನು ಮುಜುಗರಕ್ಕೆ ಸಿಲುಕಿಸುತ್ತಿದ್ದರು. ಇದೀಗ ತಮ್ಮ ಪುತ್ರ ಡಾ. ಯತೀಂದ್ರ ಅವರ ಮೂಲಕ ತಂದೆಯವರ ಪೂರ್ಣಾವಧಿ ಮುಖ್ಯಮಂತ್ರಿ ಸ್ಥಾನ ಅಬಾಧಿತ ಎಂದು ಹೇಳಿಕೆ ಕೊಡಿಸಿದ್ದಾರೆ. ಸ್ವಪಕ್ಷೀಯ ವೀರೋಧಿಗಳ ದಾಳ ಡಿ.ಕೆ. ಶಿವಕುಮಾರ್​ ಅವರಲ್ಲಿ ರಾಯಕೀಯ ಪಲಾಯನದ ಮಾತನಾಡಿಸುತ್ತಿರುವಂತಿದೆ ಎಂದು ಚಾಟಿ ಬೀಸಿದ್ದಾರೆ.

ಮುಖ್ಯಮಂತ್ರಿ ಗಾದಿಯ ಅವಧಿ ಸುತ್ತ ಗಿರಕಿ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಜನ ಪೂರ್ಣಾವಧಿ ಅಧಿಕಾರ ಕೊಟ್ಟು 8 ತಿಂಗಳು ಕಳೆಯುತ್ತಿದೆ. ಈವರೆವಿಗೂ ಒಂದೇ ಒಂದು ಅಭಿವೃದ್ಧಿ ಕಾರ್ಯದತ್ತ ಹೆಜ್ಜೆ ಇಡಲಾಗದ ಸರ್ಕಾರ, ಮೊದಲ ದಿನದಿಂದಲೂ ಮುಖ್ಯಮಂತ್ರಿ ಗಾದಿಯ ಅವಧಿ ಸುತ್ತ ಗಿರಕಿ ಹೊಡೆಯುವ ಮೂಲಕ ಜನರಲ್ಲಿ ಅಸ್ಥಿರ ಸರ್ಕಾರದ ಭಾವ ಮೂಡಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ಸಿಗರಲ್ಲಿ ಆಂತರಿಕ ಕಚ್ಚಾಟ ಶುರು

ಕಾಂಗ್ರೆಸ್ಸಿಗರ ಆಂತರಿಕ ಕಚ್ಚಾಟ ಏನೇ ಇರಲಿ, ಇದರಿಂದ ಸರ್ಕಾರದ ಆಡಳಿತದ ಮೇಲೆ ಉಂಟಾಗುತ್ತಿರುವ ಪರಿಣಾಮದಿಂದ ಜನತೆ ಸಂಕಷ್ಟಕ್ಕೆ ಸಿಲುಕುತ್ತಿರುವುದು ದುರ್ದೈವದ ಸಂಗತಿಯಾಗಿದೆ ಎಂದು ಬಿ.ವೈ. ವಿಜಯೇಂದ್ರ ತರಾಟೆ ತೆಗೆದುಕೊಂಡಿದ್ದಾರೆ.

RELATED ARTICLES

Related Articles

TRENDING ARTICLES