ಬೆಂಗಳೂರು : ಕಾಂಗ್ರೆಸ್ ಉಚಿತ ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯ ನಿಯಮಗಳಲ್ಲಿ ರಾಜ್ಯ ಸರ್ಕಾರ ಮಹತ್ವದ ಬದಲಾವಣೆಗಳನ್ನು ಜಾರಿ ಮಾಡಿದೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವ ಹೆಚ್.ಕೆ. ಪಾಟೀಲ್ ಅವರು, ಗೃಹಜ್ಯೋತಿ ಯೋಜನೆಯಡಿ ಶೇ.10ರಷ್ಟು ಬಸಲು 10 ಯುನಿಟ್ ಉಚಿತ ವಿದ್ಯುತ್ ನಿಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.
ಹಿಂದಿನ ನಿಯಮದಲ್ಲಿ ಬಳಸಿದ ಯುನಿಟ್ಗಿಂತ ಶೇ.10ರಷ್ಟು ರಿಯಾಯಿತಿ ನೀಡಲಾಗಿತ್ತು. ಇದೀಗ, ಶೇಕಡವಾರು ಬಸಲಿಗೆ 10 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮುಂದಿನ ಬಿಲ್ಲಿಂಗ್ ನಲ್ಲೇ ಇದು ಜಾರಿ
ಸಚಿವ ಕೆ.ಜೆ. ಜಾರ್ಜ್ ಮಾತನಾಡಿ, 48 ಯುನಿಟ್ಗಿಂತ ಕಡಿಮೆ ಬಳಕೆ ಮಾಡುವವರಿಗೆ 10 ಪರ್ಸೆಂಟ್ ಕೊಡ್ತಾ ಇದ್ವಿ. ಆದರೆ, ಇದೀಗ 10 ಯುನಿಟ್ ಕೊಡಲು ತೀರ್ಮಾನ ಮಾಡಿದ್ದೇವೆ. 48 ಯುನಿಟ್ ಕೊಟ್ಟರೂ ಕಡಿಮೆ ಯುಸ್ ಮಾಡ್ತಾ ಇದ್ರು. ಕೇವಲ 20-25 ಯುನಿಟ್ ಬಳಕೆ ಮಾಡಿದಾಗ ಕೇವಲ 2 ಪರ್ಸೆಂಟ್ ಕೊಡಬೇಕಿತ್ತು. ಆದರೆ, ಇದೀಗ 48 ಇರೋದು 58 ಯುನಿಟ್ ಆಗುತ್ತದೆ. ಮುಂದಿನ ಬಿಲ್ಲಿಂಗ್ ನಲ್ಲೇ ಇದು ಆಡ್ ಆಗಿ ಬರುತ್ತದೆ ಎಂದು ತಿಳಿಸಿದ್ದಾರೆ.