ಬೆಂಗಳೂರು : ಚೆಸ್ ಮಾಸ್ಟರ್ ವಿಶ್ವನಾಥನ್ ಆನಂದ್ ಹಿಂದಿಕ್ಕಿ ಆರ್. ಪ್ರಜ್ಞಾನಂದ ನಂ.1 ಪಟ್ಟಕ್ಕೇರಿದ್ದಾರೆ.
ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ಮಣಿಸುವ ಮೂಲಕ ಭಾರತದ ಉದಯೋನ್ಮುಖ ಚೆಸ್ ತಾರೆ ಪ್ರಜ್ಞಾನಂದ ನಂಬರ್ 1 ಸ್ಥಾನ ಅಲಂಕರಿಸಿದ್ದಾರೆ.
ಟಾಟಾ ಸ್ಟೀಲ್ ಚೆಸ್ ಟೂರ್ನಮೆಂಟ್ ನಲ್ಲಿ ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ಮಣಿಸಿ ಅಗ್ರ ಸ್ಥಾನಕ್ಕೇರಿದ್ದಾರೆ. ಈ ಮೂಲಕ ಪ್ರಗ್ನಾನಂದ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ನಂ.1 ಗ್ರ್ಯಾಂಡ್ ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ.
ನೆದರ್ಲ್ಯಾಂಡ್ ನಲ್ಲಿ ಮಂಗಳವಾರ ನಡೆದ ಟೂರ್ನಿಯಲ್ಲಿ ಅವರು ಈ ಸಾಧನೆಗೆ ಪಾತ್ರರಾದರು. ಇದು 2024ರ ಮೊದಲ ಸೂಪರ್ ಟೂರ್ನಮೆಂಟ್ ಆಗಿತ್ತು. ಗೆಲುವಿನ ಕುರಿತು ಮಾತನಾಡಿದ ಪ್ರಗ್ನಾನಂದ, ಅಂತಹ ಪ್ರಬಲ ಆಟಗಾರನನ್ನು ಸೋಲಿಸಿದರೆ ಯಾವಾಗಲೂ ವಿಶೇಷವಾಗಿರುತ್ತೆ. ಅಲ್ಲದೇ ಚೆಸ್ನಲ್ಲಿ ವಿಶ್ವ ಚಾಂಪಿಯನ್ ವಿರುದ್ಧ ಮೊದಲ ಬಾರಿಗೆ ಗೆದ್ದಿರುವುದು ಖುಷಿ ಕೊಟ್ಟಿದೆ ಎಂದು ಹೇಳಿದರು.