Thursday, January 23, 2025

‘ಸಿದ್ದ’ರಾಮ ಭಕ್ತನ ಬಾಯಿ ಮುಚ್ಚಿಸಲು ನೀವೇ ಸರಿ : ಆರ್. ಅಶೋಕ್ ಮನವಿ

ಬೆಂಗಳೂರು : ರಾಮಲಲ್ಲಾನ ಮೂರ್ತಿಯನ್ನು ಟೆಂಟ್ ಗೊಂಬೆಗೆ ಹೋಲಿಸಿ ರಾಮಮಂದಿರ ಕುರಿತು ಲಘುವಾಗಿ ಹೇಳಿಕೆ ನೀಡಿದ್ದ ಸಹಕಾರಿ ಸಚಿವ ಕೆ.ಎನ್. ರಾಜಣ್ಣರಿಗೆ ವಿಪಕ್ಷ ನಾಯಕ ಆರ್. ಅಶೋಕ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು, ರಾಮದ್ವೇಷಿ, ಹಿಂದೂ ವಿರೋಧಿ ಕಾಂಗ್ರೆಸ್​ ನಾಯಕರು ರಾಮಮಂದಿರದ ಬಗ್ಗೆ ತಮ್ಮ ಅಸಮಾಧಾನ, ಹೊಟ್ಟೆ ಉರಿಯನ್ನು ಪದೇ ಪದೆ ಹೊರಹಾಕುತ್ತಲೇ ಇದ್ದಾರೆ ಎಂದು ಕಿಡಿಕಾರಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ, ಮೂರು ಡಿಸಿಎಂ ಪ್ರತಿಪಾದಕ, ‘ಸಿದ್ದ’ರಾಮ ಭಕ್ತ, ಸಚಿವ ಕೆ.ಎನ್. ರಾಜಣ್ಣ ಅವರ ಬಾಯಿ ಮುಚ್ಚಿಸಲು ತಾವೇ ಸರಿ. ತಮ್ಮ ಪಕ್ಷದ ರಾಮದ್ವೇಷಿ ನಾಯಕರಿಗೆ ಸ್ವಲ್ಪ ಬುದ್ಧಿ ಹೇಳಿ, ಅವರ ಆಚಾರವಿಲ್ಲದ ನಾಲಿಗೆಗೆ ಸ್ವಲ್ಪ ನಿಯಂತ್ರಣ ಹಾಕಿ, ಇಲ್ಲವೇ ಪಕ್ಷದಿಂದ ಉಚ್ಛಾಟನೆ ಮಾಡಿ ಎಂದು ಆರ್​. ಅಶೋಕ್ ಚಾಟಿ ಬೀಸಿದ್ದಾರೆ.

ಸಚಿವ ರಾಜಣ್ಣ ಹೇಳಿದ್ದೇನು?

‘ನಾನು ಬಾಬ್ರಿ ಮಸೀದಿ ಬೀಳಿಸಿದ್ದಾಗ ಹೋಗಿದ್ದೆ. ಆಗ ಒಂದು ಟೆಂಟ್​ನಲ್ಲಿ ಎರಡು ಬೊಂಬೆ ಇಟ್ಟು ಇದೇ ಶ್ರೀರಾಮ ಅಂತ ಹೇಳ್ತಿದ್ರು. ನಾವು ನಮ್ಮೂರಿನ ದೇವಸ್ಥಾನಕ್ಕೆ ಹೋದ್ರೆ ಅಲ್ಲಿ ಒಂಥರಾ ಕಂಪನ(ವೈಬ್ರೇಶ್ರನ್) ಭಕ್ತಿ ಬರುತ್ತೆ. ಅಲ್ಲಿ ಅವತ್ತು ನನಗೇನು ಅನಿಸ್ಲಿಲ್ಲ. ಟೂರಿಂಗ್ ಟಾಕೀಸ್ ಅಲ್ಲಿ ಬೊಂಬೆ ಇಟ್ಟಿದ್ದಾರೆ ಅನಿಸ್ತು’ ಎಂದು ಸಚಿವ ರಾಜಣ್ಣ ಲಘುವಾಗಿ ಹೇಳಿಕೆ ನೀಡಿದ್ದರು. ರಾಜಣ್ಣರ ಹೇಳಿಕೆಗೆ ಬಿಜೆಪಿ ನಾಯಕರು ನಿಗಿನಿಗಿ ಕೆಂಡವಾಗಿದ್ದಾರೆ.

RELATED ARTICLES

Related Articles

TRENDING ARTICLES