Saturday, January 11, 2025

ರಾವಣನೇ ಉಳಿಯಲಿಲ್ಲ, ರಾಜಣ್ಣ ಯಾವ ಲೆಕ್ಕ? : ಬಿಜೆಪಿ ಕಿಡಿ

ಬೆಂಗಳೂರು : ರಾಮನನ್ನು ಬೊಂಬೆಗೆ ಹೋಲಿಸಿ ರಾಮಮಂದಿರ ಕುರಿತು ಲಘುವಾಗಿ ಹೇಳಿಕೆ ನೀಡಿದ್ದ ಸಹಕಾರಿ ಸಚಿವ ಕೆ.ಎನ್. ರಾಜಣ್ಣರಿಗೆ ಬಿಜೆಪಿ ತಿರುಗೇಟು ನೀಡಿದೆ.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಶ್ರೀರಾಮನ ಶಕ್ತಿ ಹಾಗೂ ಹನುಮನ ಭಕ್ತಿಯ ಕೆಣಕಿದ ರಾವಣನೇ ಉಳಿಯಲಿಲ್ಲ, ರಾಜಣ್ಣ ಯಾವ ಲೆಕ್ಕ? ಎಂದು ಛೇಡಿಸಿದೆ.

ಹಿಂದೂ ಧರ್ಮವನ್ನು ಅವಹೇಳನ ಮಾಡುವುದು, ಹಿಂದೂ ಭಾವನೆಗಳಿಗೆ ಧಕ್ಕೆ ಉಂಟುಮಾಡುವುದು ಕಾಂಗ್ರೆಸ್​ ಪಕ್ಷಕ್ಕೆ ಅಂಟಿದ ಕುಷ್ಠ ರೋಗವಿದ್ದಂತೆ. ಕೆ.ಎನ್. ರಾಜಣ್ಣ ಅವರೇ, ಅಧಿಕಾರದ ಮದ, ಕಾಂಗ್ರೆಸ್ ಗುಲಾಮಿತನದಿಂದ ಹೊರಬನ್ನಿ. ನಿಮ್ಮ ಕ್ಷೇತ್ರದ ಮತದಾರರನ್ನಾದರೂ ಕೇಳಿ, ನಿಮ್ಮ ಕುಟುಂಬಸ್ಥರನ್ನಾದರೂ ಕೇಳಿ ತಿಳಿಯಿರಿ ಎಂದು ಕುಟುಕಿದೆ.

ಕಾಂಗ್ರೆಸ್ ​ಕಾರ್ಯಕರ್ತರೂ ಕ್ಷಮಿಸಲಾರರು

ಶತ ಶತಮಾನಗಳ ಕೋಟ್ಯಂತರ ರಾಮಭಕ್ತರ ಹೋರಾಟ, ಸಹಸ್ರಾರು ಕರಸೇವಕರ ಬಲಿದಾನಗಳಿಂದ ಭವ್ಯ ರಾಮಮಂದಿರದಲ್ಲಿ ಬಾಲರಾಮ ನೆಲೆಸುತ್ತಿದ್ದಾನೆ. ಈ ಸಮಯದಲ್ಲಿ, ಶ್ರೀರಾಮ ಸೀತೆಯರನ್ನು ಬೊಂಬೆಗೆ ಹೋಲಿಸುತ್ತಿರುವ ರಾಜಣ್ಣರವರೇ, ನಾಡಿನ ಜನರಷ್ಟೇ ಅಲ್ಲ, ನಿಮ್ಮನ್ನು ಕಾಂಗ್ರೆಸ್ ​ಕಾರ್ಯಕರ್ತರೂ ಕ್ಷಮಿಸಲಾರರು ಎಂದು ಹರಿಹಾಯ್ದಿದೆ.

RELATED ARTICLES

Related Articles

TRENDING ARTICLES