Wednesday, January 22, 2025

6,6,6,6.. ರೋಹಿತ್ ಶರ್ಮಾ ಅರ್ಧಶತಕ

ಬೆಂಗಳೂರು : ಅಫ್ಘಾನಿಸ್ತಾನ ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅರ್ಧಶತಕ ಸಿಡಿಸಿದರು.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡುತ್ತಿದೆ.

22 ರನ್​ಗಳಿಗೆ 4 ವಿಕೆಟ್ ಕಳೆದುಕೊಂದು ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ನಾಯಕ ರೋಹಿತ್ ಶರ್ಮಾ ಆಸರೆಯಾಗಿದ್ದಾರೆ. 41 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್ ಹಾಗೂ 5 ಬೌಂಡಿರಿಗಳ ನೆರವಿನೊಂದಿಗೆ ಅರ್ಧಶತಕ ಪೂರೈಸಿದರು.

100 ರನ್​ಗಳ ಜೊತೆಯಾಟ

ಪವರ್‌ಪ್ಲೇಯಲ್ಲಿ ಭಾರತ ತಂಡ ಜೈಸ್ವಾಲ್, ವಿರಾಟ್ ಕೊಹ್ಲಿ, ಶಿವಂ ದುಬೆ ಮತ್ತು ಸಂಜು ಸ್ಯಾಮ್ಸನ್ ವಿಕೆಟ್ ಕಳೆದುಕೊಂಡಿತು. ಈ ವೇಳೆ ಜವಾಬ್ದಾರಿಯುತ ಆಟವಾಡಿದ ರರೋಹಿತ್ ಹಾಗೂ ರಿಂಕು ಸಿಂಗ್ ಅಫ್ಘಾನ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಇಬ್ಬರು ಮುರಿಯದ 100 ರನ್​ಗಳ ಜೊತೆಯಾಟದ ಮೂಲಕ ತಂಡದ ಮೊತ್ತವನ್ನು 140 ರನ್ ಗಡಿ ದಾಟಿಸಿದ್ದಾರೆ.​

ಸದ್ಯ ರೋಹಿತ್ ಶರ್ಮಾ ಅಜೇಯ 79 ಹಾಗೂ ರಿಂಕು ಸಿಂಗ್ ಅಜೇಯ 41 ರನ್​ ಗಳಿಸಿ ಕ್ರೀಸ್​ನಲ್ಲಿದ್ದಾರೆ. ಅಫ್ಘಾನಿಸ್ತಾನ ಪರ ಫರೀದ್ ಅಹ್ಮದ್ ಮಲಿಕ್ 3 ಮತ್ತು ಉಮರ್ಜಾಯ್ 1 ವಿಕೆಟ್ ಪಡೆದರು. ಪ್ರಸ್ತುತ 17 ಓವರ್​ಗಳಲ್ಲಿ ಭಾರತ 4 ವಿಕೆಟ್ ಕಳೆದುಕೊಂಡು 144 ರನ್​ ಗಳಿಸಿದೆ.

RELATED ARTICLES

Related Articles

TRENDING ARTICLES