Sunday, January 19, 2025

‘ಹಲೋ ಅಪ್ಪ..’ ಅಂತ ಅಲ್ಲಿಗೂ ಫೋನ್ ಹೋದಂತಿದೆ : ‘ಕೈ’ ವಿರುದ್ಧ ಬಿಜೆಪಿ ಹೊಸ ಬಾಂಬ್

ಬೆಂಗಳೂರು : 1,000 ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಕೆಪಿಎಸ್​ಸಿ ಅಧ್ಯಕ್ಷರು ಬ್ರೇಕ್​ ಹಾಕಿರುವ ವಿಚಾರ ಸಂಬಂಧ ಬಿಜೆಪಿ ಪ್ರತಿಕ್ರಿಯೆ ನೀಡಿದೆ.

ಈ ಕುರಿತು ಟ್ವೀಟ್​ ಮಾಡಿರುವ ರಾಜ್ಯ ಬಿಜೆಪಿ, ಕೆಪಿಎಸ್‌ಸಿ ಒಳಗೂ ನಡೆಯುತ್ತಿರುವ ಜಟಾಪಟಿ ನೋಡಿದರೆ ‘ಹಲೋ ಅಪ್ಪ..’ ಎಂದು ಅಲ್ಲಿಗೂ ಫೋನ್ ಹೋದಂತಿದೆ ಎಂದು ಲೇವಡಿ ಮಾಡಿದೆ.

ನೇಮಕಾತಿ‌ಗಳು ನಡೆಯುವಲ್ಲೆಲ್ಲವೂ ಕಾಂಗ್ರೆಸ್​ ಬಂದಾಗಿನಿಂದ ಅಲ್ಲೋಲ ಕಲ್ಲೋಲಗಳೇ ನಡೆಯುತ್ತಿವೆ. ಕರ್ನಾಟಕ ಲೋಕಸೇವಾ ಆಯೋಗದಲ್ಲೂ ಹಿತಾಸಕ್ತಿಗಳ ಸಂಘರ್ಷ ಶುರುವಾಗಿದ್ದು ಸಾವಿರಾರು ನೇಮಕಾತಿಗಳ ಸ್ಥಿತಿ ಡೋಲಾಯಮಾನವಾಗಿದೆ. ಕೆಪಿಎಸ್‌ಸಿಯಲ್ಲೂ ಎಟಿಎಂ ಸರ್ಕಾರ ಹೊಸ ಎಟಿಎಂ ತೆರೆದಿರುವುದು ಸ್ಪಷ್ಟವಾಗಿದೆ ಎಂದು ವಾಗ್ದಾಳಿ ನಡೆಸಿದೆ.

ತುಘಲಕ್‌ ಆಡಳಿತದಿಂದ ಖಜಾನೆ ಖಾಲಿ

ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಜನರು ಬೇಸತ್ತು ಹೋಗಿದ್ದಾರೆ. ರಾಜ್ಯದ ಯಾವುದೇ ಮೂಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಈ ಸರ್ಕಾರಕ್ಕೆ ಪಿಂಚಣಿ ನೀಡಲು ಸಾಧ್ಯವಾಗುತ್ತಿಲ್ಲ, ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡಲು ಸಾಧ್ಯವಾಗುತ್ತಿಲ್ಲ. ಸರ್ಕಾರ ರೈತರನ್ನು ಕೀಳಾಗಿ ನೋಡುತ್ತಿದೆ. ತುಘಲಕ್‌ ಆಡಳಿತದಿಂದಾಗಿ ರಾಜ್ಯದ ಖಜಾನೆ ಖಾಲಿಯಾಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ ಕಿಡಿಕಾರಿದ್ದಾರೆ.

RELATED ARTICLES

Related Articles

TRENDING ARTICLES