Wednesday, January 22, 2025

ಭಾರತ-ಅಫ್ಘಾನಿಸ್ತಾನ ಟಿ-20 ಪಂದ್ಯ ಟೈ! : ಸೂಪರ್ ಓವರ್‌ನಲ್ಲಿ ಫಲಿತಾಂಶ ನಿರ್ಧಾರ

ಬೆಂಗಳೂರು : ಅಫ್ಘಾನಿಸ್ತಾನ ವಿರುದ್ಧದ ಟಿ-20 ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ಟೈ ಮಾಡಿಕೊಂಡಿದೆ. ಇದೀಗ ಸೂಪರ್ ಓವರ್‌ನಲ್ಲಿ ಫಲಿತಾಂಶ ನಿರ್ಧಾರವಾಗಬೇಕಿದೆ.

ಟಾಸ್ ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್​ಗಳಲ್ಲಿ 213 ರನ್ ಟಾರ್ಗೆಟ್ ನೀಡಿತ್ತು. ಈ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿ ಟೈ ಮಾಡಿಕೊಂಡಿದೆ.

ಅಫ್ಘಾನಿಸ್ತಾನ ಪರ ರಹಮಾನುಲ್ಲಾ 50, ಇಬ್ರಾಹಿಂ ಝದ್ರಾನ್ 50 ರನ್, ಗುಲ್ಬದಿನ್ ನಾಯಬ್ ಅಜೇಯ 55 ರನ್ ಗಳಿಸಿದರು. ಭಾರತ ಪರ ವಾಷಿಂಗ್ಟನ್ ಸುಂದರ್ 3, ಕುಲ್ದೀಪ್ ಹಾಗೂ ಅವೇಶ್ ಖಾನ್ 1 ವಿಕೆಟ್ ಪಡೆದರು.

6 ಬಾಲ್​ಗೆ 17 ರನ್​ ಟಾರ್ಗೆಟ್

ಸೂಪರ್ ಓವರ್​ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ ಒಂದು ವಿಕೆಟ್ ಕಳೆದುಕೊಂಡು 16 ರನ್​ ಗಳಿಸಿದೆ. ಸೂಪರ್ ಓವರ್​ ಬೌಲ್ ಮಾಡಿದ ಮುಖೇಶ್​ ಕುಮಾರ್ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 16 ರನ್​ ಬಿಟ್ಟುಕೊಟ್ಟರು. ಭಾರತ ಗೆಲ್ಲಲು 6 ಬಾಲ್​ನಲ್ಲಿ 17 ರನ್​ ಗಳಿಸಬೇಕಿದೆ.

RELATED ARTICLES

Related Articles

TRENDING ARTICLES