ಬೆಂಗಳೂರು : ನಿಗಮ ಮಂಡಳಿ ಅಧ್ಯಕ್ಷರ ನೇಮಕ ವಿಳಂಬ ವಿಚಾರದ ಬಗ್ಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅಧ್ಯಕ್ಷರು ಈಗಾಗಲೇ ಹೇಳಿದ್ದಾರೆ. ಬೇಗ ಪಟ್ಟಿ ರಿಲೀಸ್ ಆಗುತ್ತೆ, ಮುಂದಕ್ಕೆ ಹಾಕಲ್ಲ ಅಂತ ಹೇಳಿದ್ದಾರೆ. ಅಧ್ಯಕ್ಷರು ಹೇಳಿದ್ಮೇಲೆ ಸತ್ಯ ಇರುತ್ತೆ ಎಂದು ಹೇಳಿದ್ದಾರೆ.
ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆ ಸಂಬಂಧ ಪೊಲೀಸರು ಎಫ್ಐಆರ್ ಹಾಕಿದ್ದಾರೆ. ಎವಿಡೆನ್ಸ್ ಕಲೆ ಹಾಕ್ತಿದ್ದಾರೆ, ಈ ಬಗ್ಗೆ ಲೋಕಲ್ ಪೊಲೀಸ್ ತೀರ್ಮಾನ ಮಾಡ್ತಾರೆ. ನಾವು ಅರೆಸ್ಟ್ ಮಾಡಿ ಅಥವಾ ಬಿಟ್ಟುಬಿಡಿ ಅಂತ ಹೇಳಕ್ಕಾಗಲ್ಲ. ಯಾವ್ ಸೆಕ್ಷನ್ ಹಾಕಬೇಕು, ಏನು ಅಂತ ಲೋಕಲ್ ಪೊಲೀಸ್ ನಿರ್ಧಾರ ಮಾಡ್ತಾರೆ. ನಾವು ಇಲ್ಲಿಂದ ಯಾವುದೇ ಡೈರೆಕ್ಷನ್ ಕೊಡಲ್ಲ ಎಂದು ತಿಳಿಸಿದ್ದಾರೆ.
ಬಿಜೆಪಿಯವರು ಹೇಳಿದ್ದೆಲ್ಲಾ ಕೇಳಕ್ಕಾಗಲ್ಲ
ಹಾನಗಲ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ಮಾತನಾಡಿ, ಆ ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ. ತನಿಖೆ ಆಗಿ ವರದಿ ಬರಲಿ. ಬಿಜೆಪಿಯವರು ಹೇಳಿದ್ದೆಲ್ಲಾ ಕೇಳಕ್ಕಾಗಲ್ಲ ನಾವು. ಅವ್ರು ನಾವು ಹೇಳಿದ್ದೆಲ್ಲಾ ಕೇಳಿದ್ರಾ..? ಎಂದು ಬಿಜೆಪಿಗರ ಮೇಲೆ ಸಚಿವ ಪರಮೇಶ್ವರ್ ಗರಂ ಆಗಿದ್ದಾರೆ.