Sunday, December 22, 2024

ದೇವೇಗೌಡ್ರು ಸುಮ್ನೆ ನಮ್ಮ ಮನೆಗೆ ಬಂದೋಗಿದ್ರೆ ಗೆಲ್ಲೋರು : ಕೆ.ಎನ್. ರಾಜಣ್ಣ

ತುಮಕೂರು : ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಸುಮ್ಮನೆ ನಮ್ಮ ಮನೆಗೆ ಬಂದು ಹೋಗಿದ್ರೆ ಗೆಲ್ಲೋರು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ.

ತುಮಕೂರಿನಲ್ಲಿ ನಡೆದ ಹಿಂದುಳಿದ ವರ್ಗಗಳ ಒಕ್ಕೂಟದ ದಶಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ದೇವೇಗೌಡರನ್ನು ಸೋಲಿಸೋದ್ರಿಂದ ಜನ ನಮ್ಮನ್ನ ಇಂದು ಗುರುತಿಸ್ತಾರೆ ಎಂದು ತಿಳಿಸಿದ್ದಾರೆ.

ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದಾಗ ಬೇರೆ ಯಾವ ಜಾತಿಯವರಿಗಾದರೂ ಅವಕಾಶ ಸಿಗುತ್ತಾ..? ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಾಗ ಬೇರೆ ಬೇರೆ ಜಾತಿಗೆ ಅವಕಾಶ ಸಿಗುತಾ..? ಎಲ್ಲಾ ಜಾತಿಗೂ ಅವಕಾಶ ಕೊಡೋದು ಕಾಂಗ್ರೆಸ್ ಪಕ್ಷ ಮಾತ್ರ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಶ್ರೀರಾಮನೋ? ಮೋದಿ ಶ್ರೀರಾಮನೋ?

ದೇವರು ಇದ್ದಾನೆ ಅಂದ್ರೆ ಇದ್ದಾನೆ, ಇಲ್ಲಾ ಅಂದ್ರೆ ಇಲ್ಲಾ ಅಷ್ಟೆ.. ಈಗೆಲ್ಲಾ ಶ್ರೀರಾಮನ ದೇವಸ್ಥಾನ ಕಟ್ಟಿಸ್ತಿದ್ದಾರಲ್ಲಾ..? ಇನ್ನೊಂದು ಐದಾರು ತಿಂಗಳು ಕಳೀಲಿ, ಏನೇನ್ ಬರುತ್ತೆ, ಹೋಗುತ್ತೆ.. ಶ್ರೀರಾಮ ಎಲ್ಲಾ ಜನರನ್ನ ಕೂಡ ಆಶಿರ್ವದಿಸೋನು. ಅದಕ್ಕಾಗಿ ರಾಮರಾಜ್ಯದ ಕಲ್ಪನೆ ಬಂದಂತದ್ದು. ಈಗ ಅದು ಬಿಜೆಪಿ ಶ್ರೀರಾಮನೋ? ಮೋದಿ ಶ್ರೀರಾಮನೋ? ನೋಡೋಣ, ಅದೇನಾಗುತ್ತೋ..? ಎಂದು ಕೆ.ಎನ್. ರಾಜಣ್ಣ ಹೇಳಿದ್ದಾರೆ.

RELATED ARTICLES

Related Articles

TRENDING ARTICLES