Wednesday, January 22, 2025

‘ಕಾಟೇರ’ ಸಿನಿಮಾ ವೀಕ್ಷಿಸಿದ ನಟ ಸುದೀಪ್ : ಈ ಸುದ್ದಿ ನಿಜಾನಾ?

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಕಾಟೇರ’ ಗಲ್ಲಾ ಪೆಟ್ಟಿಗೆ ದೂಳ್​ ಎಬ್ಬಿಸಿದೆ. ಸ್ಯಾಂಡಲ್​ವುಡ್​ನ ಸ್ಟಾರ್ಸ್​ಗಳು ಚಿತ್ರ ವೀಕ್ಷಿಸಿದ್ದಾರೆ. ವಿಶೇಷವೆಂದರೆ ನಟ ಕಿಚ್ಚ ಸುದೀಪ್ ಸಹ ‘ಕಾಟೇರ’ ಸಿನಿಮಾವನ್ನು ನೋಡಿದ್ದಾರೆ.

ಕೆಲವು ದಿನಗಳ ಹಿಂದೆ ಕಿಚ್ಚು ಸುದೀಪ್ ‘ಕಾಟೇರ’ ಸಿನಿಮಾವನ್ನು ನೋಡಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಅವರ ಜೊತೆ ಸುದೀಪ್ ಮಾತನಾಡಿ, ಶೀಘ್ರದಲ್ಲೇ ಸಿನಿಮಾ ನೋಡುತ್ತೇನೆ ಅಂತ ಹೇಳಿದ್ದರು. ಇದೀಗ ಆ ಸುದ್ದಿ ನಿಜವಾಗಿದೆ.

ಸುದೀಪ್ ಕಾಟೇರ ಸಿನಿಮಾವನ್ನು ವೀಕ್ಷಿಸಿದ್ದಾರೆ. ಈ ಮಾಹಿತಿಯನ್ನು ಸ್ವತಃ ಸುದೀಪ್ ಅವರೇ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ನೀವು ‘ಕಾಟೇರ’ ಚಿತ್ರವನ್ನು ನೋಡಿದ್ದೀರಾ? ಯಾವಾಗ ನೋಡ್ತೀರಾ ಸರ್.. ಎಂದು ಮ್ಯಾಡ್​ ಮ್ಯಾಕ್ಸ್​ ಖಾತೆಯಿಂದ ಟ್ವೀಟ್​ ಮೂಲಕ ಪ್ರಶ್ನಿಸಲಾಗಿತ್ತು. ‘ನಾನು ನೋಡಿಲ್ಲ ಅಂತ ನಿಮಗೆ ಯಾರಾದರೂ ಹೇಳಿದ್ರಾ?’ ಎಂದು ಸುದೀಪ್ ಮರುಪ್ರಶ್ನೆ ಮಾಡಿದ್ದಾರೆ.

18 ದಿನಗಳಲ್ಲಿ 190 ಕೋಟಿಗೂ ಹೆಚ್ಚು ಕಲೆಕ್ಷನ್

ಕಾಟೇರ ತನ್ನ ಗೆಲುವಿನ ಓಟವನ್ನು ಮುಂದುವರಿಸಿದೆ. 18 ದಿನಗಳಲ್ಲಿ 190.89 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ 200 ಕೋಟಿ ಕ್ಲಬ್​ನತ್ತ ಯಶಸ್ವಿಯಾಗಿ ಸಾಗುತ್ತಿದೆ. ದರ್ಶನ್ ಫ್ಯಾನ್ಸ್ ಈ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಾರದಲ್ಲೇ ‘ಕಾಟೇರ’ನ ಜೋಳಿಗೆಗೆ 200 ಕೋಟಿ ರೂ. ಸೇರುವುದು ಪಕ್ಕಾ ಎಂಬ ಲೆಕ್ಕಾಚಾರ ಶುರುವಾಗಿದೆ.

RELATED ARTICLES

Related Articles

TRENDING ARTICLES