Friday, January 3, 2025

ರಾಮಮಂದಿರ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ MS ಧೋನಿಗೆ ಆಹ್ವಾನ

ನವದೆಹಲಿ: ರಾಮ ಪ್ರಾಣಪ್ರತಿಷ್ಠೆಗೆ ಕೇವಲ 6 ದಿನಗಳು ಮಾತ್ರ ಬಾಕಿ ಉಳಿದಿದ್ದು, ಇಂದಿನಿಂದ ಪೂಜಾಕಾರ್ಯಗಳು ಆರಂಭಗೊಂಡಿದೆ.
ಈಗಲೇ ರಾಮಮಂದಿರ ಉದ್ಘಾಟನೆಗೆ ಗಣ್ಯರಿಗೆ ವಿಶೇಷ ಅತಿಥಿಗಳಿಗೆ ಆಹ್ವಾನ ನೀಡಲಾಗಿದ್ದು, ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿರುವ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರಿಗೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಆಹ್ವಾನ ನೀಡಲಾಗಿದೆ.
ರಾಂಚಿಯಲ್ಲಿರುವ ಅವರ ನಿವಾಸದಲ್ಲಿ ಆಹ್ವಾನವನ್ನು ನೀಡಿದ್ದು, ಎಂಎಸ್ ಧೋನಿ ಭಕ್ತಿಪೂರ್ವಕವಾಗಿ ಆಹ್ವಾನವನ್ನು ಸ್ವೀಕರಿಸಿದ್ದಾರೆ.
ಧೋನಿ ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸಹ-ಪ್ರಾಂತೀಯ ಕಾರ್ಯದರ್ಶಿ ಧನಂಜಯ್ ಸಿಂಗ್ ಅವರು ಆಹ್ವಾನ ನೀಡಿದ್ದಾರೆ

RELATED ARTICLES

Related Articles

TRENDING ARTICLES