ಬೆಂಗಳೂರು : ನಾಗರಿಕರು ಎಷ್ಟು ಬಿಲ್ಡಿಂಗ್ ಕಟ್ಟಿದ್ದಾರೋ ಅದಕ್ಕೆ ಟ್ಯಾಕ್ಸ್ ಕಟ್ಟಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ ನೀಡಿದ್ದಾರೆ.
ಬೆಂಗಳೂರಿನ ಗುಂಡೂರಾವ್ ಮೆಮೋರಿಯಲ್ ಹಾಲ್ನ ಶಿರೂರ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಜನಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ್ದಾರೆ.
ಗೃಹಲಕ್ಷ್ಮೀ, ರೇಷನ್ ಕಾರ್ಡ್, ಬಿಡಿಎ ಸಂಬಂಧಿತ ಸಮಸ್ಯೆಗಳು ಬಂದಿವೆ. ಹಿಂದಿನ ಬಿಜೆಪಿ ಸರ್ಕಾರ 1 ಲಕ್ಷ ಮನೆ ಕೊಡ್ತೀನಿ ಅಂತೇಳಿ, 1 ಲಕ್ಷ ಮನೆ ಸ್ವೀಕಾರ ಮಾಡಿ ಮನೆ ಕೊಟ್ಟಿಲ್ಲ. ಸರ್ಕಾರದ ವತಿಯಿಂದ ವಸತಿ ಇಲಾಖೆ ಹಣ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
2020ರಲ್ಲಿ ಬಿಜೆಪಿ ಸರ್ಕಾರವೇ ಟ್ಯಾಕ್ಸ್ ತಂದಿರೋದು. ನಾವು ಟ್ಯಾಕ್ಸ್ ವಿಚಾರವಾಗಿ ಸ್ವಲ್ಪ ಸಡಿಲಿಕೆ ಮಾಡ್ತೀವಿ. ಕಾನೂನನ್ನೇ ಬಿಜೆಪಿ ಸರ್ಕಾರ ತಂದು ಬಿಟ್ಟಿದೆ. ನಾವು ಜಾರಿ ಮಾಡಬೇಕಿದೆ ಅಷ್ಟೆ, ಅದನ್ನ ನಾವು ಸ್ವಲ್ಪ ಸಡಿಲಿಕೆ ಮಾಡುವ ಕೆಲಸ ಮಾಡ್ತೀವಿ ಎಂದು ತಿಳಿಸಿದ್ದಾರೆ.
ನಿತ್ಯ ನೂರಾರು ಅರ್ಜಿಗಳನ್ನು ತರುತ್ತಾರೆ
ಜನರನ್ನು ಸರ್ಕಾರವೇ ನೇರವಾಗಿ ಈ ಕಾರ್ಯಕ್ರಮದಡಿ ಸಂಪರ್ಕಿಸುತ್ತಿದೆ. ಈ ಮೂಲಕ ಸೂಕ್ತ ಪರಿಹಾರ ನೀಡುವ ಕೆಲಸ ನಮ್ಮದು. ಜನರು ನನ್ನ ಬಳಿ, ಮುಖ್ಯಮಂತ್ರಿಗಳು ಹಾಗೂ ಇತರೆ ಸಚಿವರುಗಳ ಬಳಿ ಪ್ರತಿನಿತ್ಯ ನೂರಾರು ಅರ್ಜಿಗಳನ್ನು ತರುತ್ತಾರೆ. ಇದನ್ನು ಕಡಿಮೆ ಮಾಡವುದು ಈ ಕಾರ್ಯಕ್ರಮದ ಉದ್ದೇಶ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.