Monday, December 23, 2024

ವೋಟ್ ಸಿಗೋ ಕಡೆ ‘ಕೈ’ ಹೋಗುತ್ತೆ : ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ : ರಾಮಮಂದಿರ ವಿಷಯದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ರಾಜಕಾರಣ ಮಾಡ್ತಿದ್ದಾರೆ ಅಂತ ಎಲ್ಲರಿಗೂ ಗೊತ್ತಿದೆ. ರಾಮಮಂದಿರ ಉದ್ಘಾಟನೆಗೆ ಬರುವಂತೆ ಕಾಂಗ್ರೆಸ್​​ನವರಿಗೆ ಆಹ್ವಾನ ಕೊಡಲಾಗಿತ್ತು. ಸಹಜವಾಗಿ ಬಂದಿದ್ರೆ ಯಾವ ಚರ್ಚೆನೂ ಆಗ್ತಿರ್ಲಿಲ್ಲ. ಎಲ್ಲಿ ವೋಟ್ ಸಿಗುತ್ತೋ ಅಲ್ಲಿ ಕಾಂಗ್ರೆಸ್​ ಹೋಗುತ್ತದೆ ಎಂದು ಆರೋಪಿಸಿದ್ದಾರೆ.

ಜವಾಬ್ದಾರಿಯುತ ಸ್ಥಾನದಲ್ಲಿರುವವರು ಆ ರೀತಿ ಮಾತನಾಡಬಾರದು. ರಾಮಮಂದಿರ ಉದ್ಘಾಟನೆಗೆ ಹೋದರೆ ಒಂದು ವರ್ಗದ ಮತಗಳು ಕೈತಪ್ಪಬಹುದು ಎಂಬ ಆಲೋಚನೆ ಕಾಂಗ್ರೆಸ್​ನದ್ದು.. ಕಾಂಗ್ರೆಸ್​ನವರು ಬಂದ್ರೆ ಸಂತೋಷ, ಬಂದಿಲ್ಲ ಅಂದ್ರೂ ಓಕೆ.. ಒಳ್ಳೆ ವಾತಾವರಣದಲ್ಲಿ ರಾಮ ಮಂದಿರ ಉದ್ಘಾಟನೆ ಆಗಬೇಕು ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES