Wednesday, January 22, 2025

ಅಮಿತ್ ಶಾ ಸಹೋದರಿ ರಾಜೇಶ್ವರಿ ನಿಧನ

ಬೆಂಗಳೂರು : ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರ ಹಿರಿಯ ಸಹೋದರಿ ರಾಜೇಶ್ವರಿ ಬೆನ್​ ಶಾ ಅವರು ನಿಧನರಾಗಿದ್ದಾರೆ.

ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಮಕರ ಸಂಕ್ರಾಂತಿ ಸಂಭ್ರಮದಲ್ಲಿದ್ದ ಅಮಿತ್​ ಶಾ ಮನೆಯಲ್ಲಿ ಇದೀಗ ಶೋಕ ಮಡುಗಟ್ಟಿದೆ.

ಕಳೆದ ಕೆಲ ದಿನಗಳ ಹಿಂದೆ ರಾಜೇಶ್ವರಿಯವರಿಗೆ ಶ್ವಾಸಕೋಸ ಕಸಿ ಮಾಡಲಾಗಿತ್ತು. ಆಪರೇಷನ್ ಬಳಿಕ ಅವರು ಮುಂಬೈನ ಆಸ್ಪತ್ರೆಯಲ್ಲಿಯೇ ಚೇತರಿಸಿಕೊಳ್ಳುತ್ತಿದ್ದರು.

ಗುಜರಾತ್​ನಲ್ಲಿಯೇ ಎರಡು ಸಾರ್ವಜನಿಕ ಕರ್ಯಕ್ರಮಗಳಲ್ಲಿ ಶಾ ಪಾಲ್ಗೊಳ್ಳಬೇಕಿತ್ತು. ಆದರೆ, ಸಹೋದರಿ ನೀಧನದ ಸುದ್ದಿ ತಿಳಿದ ಬಳಿಕ ಅಮಿತ್​ ಶಾ ಅವರು ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸೇರಿದಂತೆ ಬಿಜೆಪಿ ನಾಯಕರು ರಾಜೇಶ್ವರಿ ಶಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

RELATED ARTICLES

Related Articles

TRENDING ARTICLES