Monday, December 23, 2024

ಶಬರಿಗಿರಿಯಲ್ಲಿ ಮಕರ ‘ಜ್ಯೋತಿ’ ದರ್ಶನ, ಮಣಿಕಂಠನ ಭಕ್ತರು ಪುನೀತ

ಬೆಂಗಳೂರು : ಪ್ರತಿ ವರ್ಷದಂತೆಯೇ ಈ ಬಾರಿಯೂ ಶಬರಿಮಲೆಯಲ್ಲಿ ಮಕರ ‘ಜ್ಯೋತಿ’ ದರ್ಶನವಾಯಿತು.

ಕೇರಳದ ಪಟ್ಟಣಂತಿಟ್ಟ ಜಿಲ್ಲೆಯ ಶಬರಿಮಲೆ ಸಮೀಪದ ಪೊನ್ನಂಬಲಮೇಡು ಬೆಟ್ಟದಲ್ಲಿ ಸಂಜೆ 6.30ರಿಂದ 7 ಗಂಟೆಯೊಳಗೆ ಒಟ್ಟು ಮೂರು ಬಾರಿ ಮಕರ ಜ್ಯೋತಿ ಗೋಚರಿಸಿತು.

ಮಕರ ಸಂಕ್ರಮಣದ ದಿನವಾದ ಇಂದು ಮಕರ ಜ್ಯೋತಿ ದರ್ಶನವಾಗಿದ್ದು, ಸಾವಿರಾರು ಅಯ್ಯಪ್ಪನ ಭಕ್ತರು ಮಕರ ಜ್ಯೋತಿ ದರ್ಶನ ಪಡೆದು ಪುನೀತರಾದರು. ಮಕರ ಜ್ಯೋತಿ ಗೋಚರಿಸುತ್ತಿದ್ದಂತೆಯೇ ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂಬ ಉದ್ಘೋಷ ಮುಗಿಲುಮುಟ್ಟಿತ್ತು.

ಮಕರ ಜ್ಯೋತಿ ದರ್ಶನ ಕಣ್ತುಂಬಿಕೊಳ್ಳುವುದೇ ಒಂದು ಪುಣ್ಯ. ಈ ದಿನ ಈ ಕ್ಷಣಕ್ಕೆ ಅಯ್ಯಪ್ಪನ ಭಕ್ತರು, ಲಕ್ಷಾಂತರ ಜನರು ಕಾಯ್ತಾ ಇರ್ತಾರೆ. ಅದರಂತೆ, ಜ್ಯೋತಿ ರೂಪದಲ್ಲಿ ದರ್ಶನ ನೀಡಿದ ಮಣಿಕಂಠನನ್ನು ಕಣ್ತುಂಬಿಕೊಂಡು, ಮನದಲ್ಲಿ ಇಷ್ಟಾರ್ಥ ಪ್ರಾಪ್ತಿಯಾಗಲೆಂದು ಭಕ್ತರು ಮನದಲ್ಲೇ ಬೇಡಿಕೊಂಡರು.

RELATED ARTICLES

Related Articles

TRENDING ARTICLES