Monday, November 4, 2024

ತಮಿಳುನಾಡಿನ ಮಧುರೈನಲ್ಲಿ ‘ಜಲ್ಲಿಕಟ್ಟು’ ಕ್ರೀಡೆ ಆರಂಭ

ಬೆಂಗಳೂರು : ತಮಿಳುನಾಡಿನಲ್ಲಿ ಪೊಂಗಲ್ ಹಬ್ಬದ ಸಂಭ್ರಮ ಗರಿಗೆದರಿದೆ. ಇಲ್ಲಿನ ಪ್ರಸಿದ್ಧ ಸಾಹಸಮಯ ಸಾಂಪ್ರದಾಯಿಕ ಆಟವಾದ ‘ಜಲ್ಲಿಕಟ್ಟು’ ಹಲವೆಡೆ ಆರಂಭವಾಗಿದೆ. ಅದರಲ್ಲೂ ಮಧುರೈನ ಅವನಿಯಾಪುರಂನಲ್ಲಿ ನಡೆಯುವ ಜಲ್ಲಿಕಟ್ಟು ಹೆಚ್ಚು ಪ್ರಸಿದ್ಧವಾಗಿದೆ.

ಸ್ಪರ್ಧೆ ಇಂದಿನಿಂದ ಆರಂಭವಾಗಿದ್ದು, ಒಂದು ಸಾವಿರ ಗೂಳಿಗಳು ಮತ್ತು ಅವುಗಳನ್ನು ಪಳಗಿಸಲು 600 ಜನರು ಸಜ್ಜಾಗಿದ್ದಾರೆ. ಈ ಸ್ಪರ್ಧೆಯು ಸಂಜೆ ವರೆಗೆ 8 ಸುತ್ತುಗಳಲ್ಲಿ ನಡೆಯಲಿದೆ. ಪ್ರತಿ ಸುತ್ತಿನಲ್ಲಿ 50ರಿಂದ 75 ಗೂಳಿ ಪಳಗಿಸುವವರು ಭಾಗವಹಿಸಲಿದ್ದಾರೆ. ಹೆಚ್ಚು ಗೂಳಿಗಳನ್ನು ಪಳಗಿಸಿದ ಸಾಹಸಿಗರು ಮುಂದಿನ ಸುತ್ತಿನಲ್ಲಿ ಆಡಲು ಅವಕಾಶ ಪಡೆಯುತ್ತಾರೆ.

ಅವನಿಯಪುರಂ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಭಾಗವಹಿಸಿದ 1,000 ಹೋರಿಗಳು ಮತ್ತು 600 ಗೂಳಿ ಪಳಗಿಸುವವರನ್ನು ಆಯ್ಕೆ ಮಾಡಲಾಗಿದೆ. ಜಲ್ಲಿಕಟ್ಟು ಅನ್ನೋದು ತಮಿಳುನಾಡು ಗ್ರಾಮೀಣ ಪ್ರದೇಶದಲ್ಲಿ ಆಡುವ ಒಂದು ಸಂಪ್ರಾದಾಯಿಕ ಕ್ರೀಡೆ. ಇದರಲ್ಲಿ ಗೂಳಿಗಳನ್ನ ಜನರು ಪಳಗಿಸುವ ಮೂಲಕ ಆಟವನ್ನ ಎಂಜಾಯ್ ಮಾಡ್ತಾರೆ. ತಮಿಳುನಾಡಿನಲ್ಲಿ 3 ದಿನಗಳ ಕಾಲ ನಡೆಯುವ ಜಲ್ಲಿಕಟ್ಟು ಕ್ರೀಡೆಗಳನ್ನ ವೀಕ್ಷಿಸಲು ಸಾವಿರಾರು ಜನರು ಸೇರುತ್ತಾರೆ.

RELATED ARTICLES

Related Articles

TRENDING ARTICLES