Saturday, November 23, 2024

ಪಾಕಿಸ್ತಾನದಲ್ಲಿ 1 ಮೊಟ್ಟೆ ಬೆಲೆ 33 ರೂ., ಕೆಜಿ ಚಿಕನ್ 615 ರೂ.

ಬೆಂಗಳೂರು : ಆರ್ಥಿಕ ಬಿಕ್ಕಟ್ಟಿನಿಂದ ಒದ್ದಾಡುತ್ತಿರುವ ನೆರೆಯ ರಾಷ್ಟ್ರ ಪಾಕಿಸ್ತಾನ ತನ್ನ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಹೆಣಗಾಡುತ್ತಿದೆ. ಈ ನಡುವೆ ಮಾರುಕಟ್ಟೆಯಲ್ಲಿ ಅಗತ್ಯವಸ್ತುಗಳ ಬೆಲೆ ದುಪ್ಪಟ್ಟಾಗಿದ್ದು, ಜನರನ್ನು ಮತ್ತಷ್ಟು ಸಂಕಷ್ಟಕ್ಕೀಡುಮಾಡಿವೆ.

ಇಲ್ಲಿನ ಪಂಜಾಬ್‌ ಪ್ರಾಂತೀಯ ರಾಜಧಾನಿ ಲಾಹೋರ್‌ನ ಮಾರುಕಟ್ಟೆಗಳಲ್ಲಿ ಮೊಟ್ಟೆಯ ಬೆಲೆ ಪ್ರತಿ ಡಜನ್‌ಗೆ 400 ಪಾಕಿಸ್ತಾನಿ ರೂಪಾಯಿಗಳಿಗೆ ಏರಿಕೆಯಾಗಿದೆ. ಒಂದು ಮೊಟ್ಟೆಯ ಬೆಲೆ 33 ರೂ.ಗಳಿಗೆ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರತಿ ಕೆ.ಜಿ ಈರುಳ್ಳಿಗೆ ಸರ್ಕಾರ 175 ರೂ. ನಿಗದಿಪಡಿಸಿದ್ದರೆ, ವ್ಯಾಪಾರಿಗಳು 200 ರಿಂದ 250 ರೂ. ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಒಂದು ಡಜನ್‌ ಮೊಟ್ಟೆಯ ಬೆಲೆ 400 ರೂ. ತಲುಪಿದ್ದರೆ, ಒಂದು ಕೆಜಿ ಚಿಕನ್‌ ಬೆಲೆ 615 ರೂ.ಗಳಿಗೆ ಏರಿಕೆಯಾಗಿದೆ. ಇದರಿಂದ ಸಾಮಾನ್ಯ ಜನರು ಕುಟುಂಬ ನಿರ್ವಹಣೆಗೂ ಕಷ್ಟಪಡುವಂತಾಗಿದೆ.

ಸರ್ಕಾರ ದರ ನಿಗದಿಮಾಡಿದ್ದರೂ ಕ್ಯಾರೆ ಎನ್ನದ ವ್ಯಾಪಾರಿಗಳು ತಮ್ಮಿಷ್ಟದ ದರಗಳಿಗೆ ವಸ್ತುಗಳನ್ನ ಮಾರಾಟ ಮಾಡುತ್ತಿದ್ದಾರೆ.

RELATED ARTICLES

Related Articles

TRENDING ARTICLES