Tuesday, November 5, 2024

ಭಂಡಾರದ ಒಡೆಯ ‘ಮೈಲಾಪುರ ಮಲ್ಲಯ್ಯ’ ಜಾತ್ರೆಗೆ ಭಕ್ತರ ದಂಡು

ಯಾದಗಿರಿ : ಕಲ್ಯಾಣ ಕರ್ನಾಟಕದ ಪ್ರಸಿದ್ಧ ಭಂಡಾರದ ಒಡೆಯ ಖ್ಯಾತಿಯ ‘ಮೈಲಾಪುರ ಮಲ್ಲಯ್ಯ ಜಾತ್ರೆ’ ನಿಮಿತ್ತವಾಗಿ ಲಕ್ಷಾಂತರ ಜನರು ಊರಗಳತ್ತ ಮುಖ ಮಾಡಿದ್ದಾರೆ.

ಯಾದಗಿರಿ ರೈಲ್ವೆ ನಿಲ್ದಾಣದಿಂದ ‌ವಿಶೇಷ ಬಸ್​ಗಳ ವ್ಯವಸ್ಥೆಯಿಂದಾಗಿ ಮಲ್ಲಯ್ಯನ ಭಕ್ತರು ದೇವರ ದರ್ಶನಕ್ಕಾಗಿ ಆಗಮಿಸುತ್ತಿದ್ದಾರೆ.

ಬೆಂಗಳೂರು ಪೂನಾ, ಮಹಾ ನಗರಗಳತ್ತ ಹೋಗಿದ್ದ ಜನರು ಸಂಕ್ರಾಂತಿ ಹಬ್ಬಕ್ಕೆ ಕಿಕ್ಕಿರಿದು ಲಕ್ಷಾಂತರ ಭಕ್ತರ ದಂಡೆ ಹರಿದು ಬರುತ್ತಿದೆ. ಮೈಲಾರಲಿಂಗನ ಜಾತ್ರೆಗೆ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ಕರ್ನಾಟಕದ ವಿವಿಧೆಡೆಗಳಿಂದ ಸುಮಾರು ಲಕ್ಷಾಂತರ ಭಕ್ತರು ಈ ಬಾರಿ ಆಗಮಿಸಿದ್ದಾರೆ.‌

ಸಂಕ್ರಾಂತಿಯಂದು ಅದ್ದೂರಿ ಜಾತ್ರೆ

ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುವ ಮೈಲಾಪುರದ ಜಾತ್ರೆಯು ಪ್ರತಿ ವರ್ಷದಂತೆ ಈ ವರ್ಷವೂ ಮಕರ ಸಂಕ್ರಾಂತಿಯಂದು ಅದ್ದೂರಿಯಾಗಿ ನಡೆಯುತ್ತಿದೆ. ಈ ಬಾರಿಯೂ ಜಿಲ್ಲಾಡಳಿತದ ಸಕಲ ಸಿದ್ಧತೆಯಿಂದಾಗಿ ಸುಸಜ್ಜಿತವಾಗಿ ನಡೆಸುತ್ತಿದ್ದು, ಇನ್ನೂ ಬದೋಬಸ್ತ್ ಗಾಗಿ ಹಲವು ಪೋಲಿಸ್ ತುಕಡಿಗಳನ್ನ ನಿಯೋಜನೆ ಮಾಡಲಾಗಿದೆ.

RELATED ARTICLES

Related Articles

TRENDING ARTICLES