Wednesday, January 22, 2025

ಮಿಸ್ ಮಾಡಬೇಡಿ.. ‘ವಿದ್ಯಾಸಿರಿ’ ಅರ್ಜಿ ಸಲ್ಲಿಕೆಗೆ ನಾಳೆಯೇ ಕೊನೆ ದಿನ

ಬೆಂಗಳೂರು : ಪ್ರಸಕ್ತ 2022-23ನೇ ಸಾಲಿನ ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನವಾಗಿದೆ. ಹೀಗಾಗಿ, ಅರ್ಹ ವಿದ್ಯಾರ್ಥಿಗಳು, ಇನ್ನೂ ಅರ್ಜಿ ಸಲ್ಲಿಸದವರು ತಪ್ಪದೇ ಅರ್ಜಿ ಸಲ್ಲಿಸಬೇಕಿದೆ.

ಮೆಟ್ರಿಕ್ ನಂತರದ ಕೋರ್ಸ್​ಗಳಲ್ಲಿ ವ್ಯಾಸಂಗ (ಓದುತ್ತಿರುವ) ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿಗೆ ವಿದ್ಯಾಸಿರಿ ವಿದ್ಯಾರ್ಥಿವೇತನ, ಶುಲ್ಕ ಮರು ಪಾವತಿ, ವಸತಿ ಸಹಾಯ ಯೋಜನೆಯಡಿ ಈಗಾಗಲೇ ಅರ್ಜಿ ಕರೆಯಲಾಗಿತ್ತು.

ಅರ್ಜಿ ಸಲ್ಲಿಸಲು ನಿಗದಿಪಡಿಸಿದ್ದ ಕೊನೆಯ ದಿನಾಂಕ ಮುಂದೂಡಿ ಜನವರಿ 15ರೊಳಗೆ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅರ್ಹ ವಿದ್ಯಾರ್ಥಿಗಳು ಆನ್​ಲೈನ್​ನಲ್ಲಿ ಕೂಡಲೇ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಮನೆಯಿಂದ ಕಾಲೇಜಿಗೆ 5 ಕಿ.ಮೀ. ದೂರ ಇರುವ ಸರ್ಕಾರಿ ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶ ಪಡೆಯದೇ ಇರುವ ಕಾಲೇಜು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಮಾಹಿತಿಗೆ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬಹುದು.

ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು

  • ಎಸ್ಸೆಸ್ಸೆಲ್ಸಿ ಅಂಕಪಟ್ಟಿ
  • ಪಿಯುಸಿ / ಸೆಮಿಸ್ಟರ್ ಅಂಕಪಟ್ಟಿ
  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಪುಸ್ತಕ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ದೂರ ದೃಢೀಕರಣ ಪತ್ರ.
  • ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ (1)

RELATED ARTICLES

Related Articles

TRENDING ARTICLES