Monday, December 23, 2024

ದಿ. ನಟಿ ಲೀಲಾವತಿ ಸ್ಮಾರಕ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಪುತ್ರ ವಿನೋದ್​ ರಾಜ್​!

ಬೆಂಗಳೂರು: ದಿ. ನಟಿ ಲೀಲಾವತಿ ಅವರು 2023ರ ಡಿಸೆಂಬರ್ 8 ರಂದು ವಯೋಸಹಜ ಖಾಯಿಲೆಯಿಂದ ದೈವಾಧೀನರಾಗಿದ್ದರು, ಇಂದು ಅವರ ಸ್ಮಾರಕ ನಿರ್ಮಾಣಕ್ಕೆ ಗುದ್ದಲಿ ಪೂಜೆ ಕಾರ್ಯವನ್ನು ನಟ ಹಾಗು ಪುತ್ರ ವಿನೋದ್ ರಾಜ್​ ನೆರವೇರಿಸಿದರು.

ನೆಲಮಂಗಲ ತಾಲೂಕಿನ ಖಾಸಗಿ ಆಸ್ಪತ್ರೆಯಲ್ಲಿ ಡಿ.8ರಂದು 85 ವರ್ಷ ವಯಸ್ಸಿನ ಹಿರಿಯ ನಟಿ ಲೀಲಾವತಿಯವರು ವಯೋಸಹಜ ಕಾರಣದಿಂದ ನಿಧನಹೊಂದಿದ್ದರು. ಬಳಿಕ ಸೋಲದೇವನಹಳ್ಳಿಯ ಅವರ ತೋಟದ ಮನೆಯ ಆವರಣದಲ್ಲೆ ಇವರ ಅಂತ್ಯ ಸಂಸ್ಕಾರ ನೆರವೇರಿಸಲಾಗಿತ್ತು.

ಇದನ್ನೂ ಓದಿ: ಸಂಸದ ಅನಂತ ಕುಮಾರ್ ಹೆಗಡೆ ವಿರುದ್ದ ಸುಮೊಟೊ ಪ್ರಕರಣ ದಾಖಲು! 

ದಿ.ನಟಿ ಲೀಲಾವತಿ ನಿಧನ ಹೊಂದಿದ ಒಂದು ತಿಂಗಳ ಬಳಿಕ ಅವರ ಸ್ಮಾರಕ ನಿರ್ಮಾಣಕ್ಕೆ ಇಂದು ಗುದ್ದಲಿ ಪೂಜೆ ನೆರವೇರಿತು, ಪುತ್ರ ವಿನೋದ್​ ರಾಜ್ ದಂಪತಿ ಸಮೇತವಾಗಿ ಈ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಹಾಗು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್​ ಮುನಿಯಪ್ಪ ಭಾಗಿಯಾಗಿ ಗುದ್ದಲಿ ಪೂಜೆ ನೆರವೇರಿಸಿದರು.

ಈ ವೇಳೆ ನೆಲಮಂಗಲ ಶಾಸಕ ಶ್ರೀನಿವಾಸಯ್ಯ, ಸ್ಥಳೀಯ ಮುಖಂಡರು ಹಾಗು ಕುಟುಂಬಸ್ಥರು ಇದ್ದರು.

RELATED ARTICLES

Related Articles

TRENDING ARTICLES