Saturday, January 18, 2025

ಬುದ್ಧಿಮಾಂದ್ಯ ಮಹಿಳೆಯ ಮೇಲೆ ರೇಪ್​ & ಮರ್ಡರ್: ಜಮೀನಲ್ಲಿ ಬೆತ್ತಲೆ ಶವ ಪತ್ತೆ

ಮಂಡ್ಯ: ಪಾಳುಬಿದ್ದ ಜಮೀನೊಂದರಲ್ಲಿ ಮಹಿಳೆಯ ಬೆತ್ತಲೆ ಮೃತ ದೇಹ ಪತ್ತೆಯಾಗಿದ್ದು ಬುದ್ಧಿಮಾಂದ್ಯ ಮಹಿಳೆ ರೇಪ್​ ಮಾಡಿ ಹತ್ಯೆಗೈದ ಶಂಕೆ ವ್ಯಕ್ತವಾಗಿದೆ. ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದೆ. 

ನಾಗಮಂಗಲ ತಾಲೂಕಿನ ಬೆಳ್ಳೂರು ಸಮೀಪದ ತಿರುಮಲಪುರ ಗ್ರಾಮದ 29 ವರ್ಷದ ಮಹಿಳೆಯ ಮೃತ ದೇಹ ಎಂದು ಗುರುತಿಸಲಾಗಿದೆ. ಬೆಳ್ಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ ಪಕ್ಕದ ಹರ್ಷ ಹೋಟೆಲ್ ಸಮೀಪದ ಪಾಳು ಜಮೀನಿನಲ್ಲಿ ಮೃತದೇಹ ಪತ್ತೆಯಾಗಿದೆ. ನಾಲ್ಕು ದಿನಗಳ ಹಿಂದೆ ಮನೆಯಿಂದ ಹೊರ ಹೋಗಿದ್ದ ಬುದ್ಧಿಮಾಂದ್ಯ ಮಹಿಳೆ ಇಂದು ಬೆತ್ತಲೆ ಶವವಾಗಿ ಪತ್ತೆಯಾಗಿದ್ದಾರೆ.

ಇದನ್ನೂ ಓದಿ: ಇಂದಿನಿಂದ ರಾಹುಲ್‌ ನ್ಯಾಯ ಯಾತ್ರೆ ಆರಂಭ; ಸಿಎಂ. ಡಿಸಿಎಂ ಭಾಗಿ

ಪಾಳು ಜಮೀನಿನಲ್ಲಿ ಅತ್ಯಾಚಾರ ಎಸಗಿ, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಮಂಡ್ಯ ಎಸ್​ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

RELATED ARTICLES

Related Articles

TRENDING ARTICLES