Monday, December 23, 2024

ಗರ್ಭಿಣಿ ನಾಪತ್ತೆ; ಗಲ್ಲಿ ಗಲ್ಲಿಯಲ್ಲಿ ಪತ್ನಿಗಾಗಿ ಪತಿಯ ಅಲೆದಾಟ

ಬೆಂಗಳೂರು: ಮನೆಬಿಟ್ಟು ಹೋಗಿರುವ ಪತ್ನಿಗಾಗಿ ಪತಿಯೊಬ್ಬರು ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲಿ ಅಲೆದಾಡಿ ಹುಡುಕಾಡುತ್ತಿರುವ ಘಟನೆ ನಡೆದಿದೆ. 

ಸ್ವಾಮಿ ಎಂಬುವವರು ಹಗಲು-ರಾತ್ರಿ ಎನ್ನದೇ ಮನದಾಕೆ ಶಾಲಿನಿಗಾಗಿ ಕಣ್ಣೀರಿಡುತ್ತಿದ್ದಾರೆ. ಶಾಲಿನಿ ಹಾಗೂ ಸ್ವಾಮಿ ದಂಪತಿ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕಾಮತ್ ಲೇಔಟ್‌ನಲ್ಲಿ ವಾಸವಾಗಿದ್ದಾರೆ. ಈ ದಂಪತಿಗೆ 5 ವರ್ಷದ ಮಗುವಿದ್ದು, ಇತ್ತೀಚೆಗೆ ಶಾಲಿನಿ 4 ತಿಂಗಳ ಗರ್ಭಿಣಿಯಾಗಿದ್ದಳು. ಎಂದಿನಂತೆ ಬೆಳಗ್ಗೆ 6 ಗಂಟೆ ಸುಮಾರಿಗೆ ಶಾಲಿನಿ ಹಾಲು ತರಲು 30 ರೂ. ಹಣದೊಂದಿಗೆ ಹೊರಗೆ ಹೋಗಿದ್ದಾರೆ. ಆದರೆ 8 ಗಂಟೆ ಆದರೂ ಮನೆಗೆ ವಾಪಸ್‌ ಬಾರದೇ ಇದ್ದಾಗ ಕುಟುಂಸ್ಥರು ಗಾಬರಿ ಆಗಿದ್ದಾರೆ.

ಇದನ್ನೂ ಓದಿ: ನೀನು ಕೆಟ್ಟ ಹುಳು, ಹಿಂದೂ ಸಮಾಜಕ್ಕೇ ಕಳಂಕ : ದಿನೇಶ್ ಗುಂಡೂರಾವ್

ಕೂಡಲೇ ಮನೆ ಸುತ್ತಮುತ್ತ ಹುಡುಕಾಡಲು ಶುರು ಮಾಡಿದ್ದಾರೆ. ಆದರೆ ಎಲ್ಲೂ ಕಾಣಿಸಿಲ್ಲ. ಮೆಜೆಸ್ಟಿಕ್ ಹಾಗೂ ಬಿಎಂಟಿಸಿ ಬಸ್ ಸ್ಟ್ಯಾಂಡ್‌, ಕೆ.ಆರ್ ಮಾರ್ಕೆಟ್, ಸ್ಯಾಟ್ ಲೈಟ್ ಬಸ್ ಸ್ಟ್ಯಾಂಡ್‌ನಲ್ಲೂ ಶಾಲಿನಿಗಾಗಿ ಕುಟುಂಬಸ್ಥರು ಹುಡುಕಾಡಿದ್ದಾರೆ. ಬೆಳಗ್ಗೆಯಿಂದ ಮಧ್ಯರಾತ್ರಿವರೆಗೂ ಹುಡುಕಾಟ ನಡೆಸಿದ್ದರು, ಪತ್ನಿಯ ಸುಳಿವು ಮಾತ್ರ ಸಿಕ್ಕಿಲ್ಲ.

ಈ ವೇಳೆ ಅಕ್ಕ-ಪಕ್ಕದ ಮನೆಗಳ ಸಿಸಿ ಟಿವಿಯನ್ನು ಪರಿಶೀಲಿಸಿದ್ದಾರೆ. ಆಗ ಪತ್ನಿ ಶಾಲಿನಿ ‌ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮತ್ತಷ್ಟು ಸಿಸಿಟಿವಿ ಪರಿಶೀಲನೆ ಮಾಡಿದಾಗ ಪತ್ನಿ ಬಿಎಂಟಿಸಿ ಬಸ್ ಹತ್ತಿ ತೆರಳುವುದು ಗೊತ್ತಾಗಿದೆ.

ಇನ್ನು ನಡೆದು ಹೋಗುವಾಗ ಧರಿಸಿದ್ದ ಚಪ್ಪಲಿಯನ್ನು ರಸ್ತೆ ಮಧ್ಯೆ ಬಿಟ್ಟಿದ್ದಾಳೆ. ಆದರೆ ಬಸ್‌ ಹತ್ತಿದ ಶಾಲಿನಿ 5 ವರ್ಷದ ಮಗವನ್ನು ಬಿಟ್ಟು ಎಲ್ಲಿಗೆ ತೆರಳಿದ್ದರೂ? ಯಾಕಾಗಿ ಮನೆ ಬಿಟ್ಟು ಹೋಗಿದ್ದಾರೆ ಎಂಬ ಮಾಹಿತಿ ತಿಳಿದಿಲ್ಲ.

ಸದ್ಯ ತಾವರೆಕೆರೆ ಪೊಲೀಸ್ ಠಾಣೆಗೆ ಶಾಲಿನಿ ಪತಿ ಸ್ವಾಮಿ ದೂರು ನೀಡಿದ್ದಾರೆ.

 

 

 

 

RELATED ARTICLES

Related Articles

TRENDING ARTICLES