Monday, January 27, 2025

ಇವನ್ಯಾವ ಪುಟಗೋಸಿ, ಮಗನೇ ಸಿದ್ದರಾಮಯ್ಯ ಅಂತಾನೆ : ಶಿವರಾಜ ತಂಗಡಗಿ ಕಿಡಿ

ಕೊಪ್ಪಳ : ಇವನ್ಯಾವ ಪುಟಗೋಸಿ, ಮಗನೇ ಸಿದ್ದರಾಮಯ್ಯ ಅಂತಾನೆ. ಟೀಕೆ ಮಾಡಬೇಕು, ನಾವು ಮಾಡ್ತಿವಿ ಆದ್ರೆ, ಈ ರೀತಿ ಭಾಷೆ ಬಳಸಲ್ಲ ಎಂದು ಅನಂತಕುಮಾರ್ ಹೆಗಡೆ ವಿರುದ್ಧ ಸಚಿವ ಶಿವರಾಜ ತಂಗಡಗಿ ಕಿಡಿಕಾರಿದ್ದಾರೆ.

ಕೊಪ್ಪಳ ಜಿಲ್ಲೆ ಕಾರಟಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇಷ್ಟಕ್ಕೆ ನಿಲ್ಲಿಸಿದ್ರೆ ಒಳ್ಳೆಯದು.. ಮುಂದುವರಿದ್ರೆ ನಮ್ಮ ಭಾಷೆಯಲ್ಲಿ ಉತ್ತರ ಕೊಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ರಾಜ್ಯದಲ್ಲಿ ಅಷ್ಟೇ ಅಲ್ಲ, ದೇಶದಲ್ಲಿ ತಮ್ಮದೆ ಆದ ಬೆಂಬಲಿಗರನ್ನ ಹೊಂದಿದ್ದಾರೆ. ನಾವು ಯಾವ ರಾಜಕಾರಣಿಗೂ ಈ ರೀತಿ ಮಾತಾಡಿಲ್ಲ, ನಮಗೊಂದು ಸಂಸ್ಕಾರ ಇದೆ. ಅವರ ನಾಲಿಗೆಗೆ ತಕ್ಕಂತೆ ಉತ್ತರ ಕೊಡಬೇಕಾಗತ್ತೆ. ಇಲ್ಲಿಗೆ ನಿಲ್ಲಿಸಿದ್ರೆ ಒಳ್ಳೆಯದು ಇಲ್ಲದಿದ್ದರೆ ಉತ್ತರ ಕರ್ನಾಟಕ ಭಾಷೆಯಲ್ಲೇ ಉತ್ತರ ಕೊಡಬೇಕಾಗತ್ತೆ ಎಂದು ಗುಡುಗಿದ್ದಾರೆ.

ಇವ್ರ ಹಣೆಬರಹ ನನಗೆ ಗೊತ್ತಿಲ್ವಾ..?

ಚುನಾವಣೆ ಬಂದಾಗ ಇವರಿಗೆ ಎಲ್ಲವು ನೆನಪಾಗ್ತಾವೆ, ಇವರ ಕಥೆ ನಮಗೆ ಗೊತ್ತಿಲ್ವಾ..? ಇವರ ಹಣೆಬರಹ ನನಗೆ ಗೊತ್ತಿಲ್ವಾ..? ಏಕವಚನದಲ್ಲಿ ನಮ್ಮ ನಾಯಕರಿಗೆ ಮಾತಾಡೋ ಯೋಗ್ಯತೆ ಇವರಿಗೆ ಇಲ್ಲ. ಈಶ್ವರಪ್ಪ ಸಿದ್ದರಾಮಯ್ಯ ಮಾತಾಡ್ತಾರೆ, ಅವರದು ಒಂದು ವಯಸ್ಸು ನಾವು ಅವರ ಬಗ್ಗೆ ಮಾತಾಡಲ್ಲ ಎಂದು ಹೇಳಿದ್ದಾರೆ.

ಮಗನೇ ಸಿದ್ದರಾಮಯ್ಯ ಅಂದಿದ್ದಾನೆ

ಬರೀ ಸಿದ್ದರಾಮಯ್ಯ ಅಂದಿದ್ರೆ ನಾವು ಒಪ್ಕೊತಿದ್ವಿ. ಮಗನೆ ಸಿದ್ದರಾಮಯ್ಯ ಅಂದಿದ್ದಾನೆ. ಇದಕ್ಕಿಂತ ಹೆಚ್ಚಿನ ಒರಟ ಭಾಷೆಯಲ್ಲೂ ಹೇಳೊಕೆ ಬರುತ್ತೆ. ನಾನು ಉತ್ತರ ಕರ್ನಾಟಕದವನು, ಉತ್ತರ ಕರ್ನಾಟಕ ಭಾಷೆ ಹೆಂಗಿದೆ ಅಂತ ಎಲ್ಲರಿಗೂ ಗೊತ್ತು. ಇದೆ ಮುಂದುವರಿದ್ರೆ ಗೊತ್ತು ಮಾಡಿ ಕೊಡಬೇಕಾಗತ್ತೆ. ಸಿದ್ದರಾಮಯ್ಯ ಅವರು ಸಂಸ್ಕಾರ ಗೊತ್ತಿಲ್ಲ ಎಂದು ಸ್ಮೂತ್ ಆಗಿ ಹೇಳಿದ್ದಾರೆ. ನಾನು ಹಾಗೆ ಹೇಳಲ್ಲ, ಇದನ್ನೆ ಮುಂದುವರೆಸಿದ್ರೆ ನಾನು ನಮ್ಮ ಭಾಷೆಯಲ್ಲಿ ಉತ್ತರ ಕೊಡಬೇಕಾಗತ್ತೆ ಎಂದು ಸಚಿವ ಶಿವರಾಜ ತಂಗಡಗಿ ವಾರ್ನಿಂಗ್ ಕೊಟ್ಟಿದ್ದಾರೆ.

RELATED ARTICLES

Related Articles

TRENDING ARTICLES