Thursday, December 19, 2024

ಪ್ರಿಯಾಂಕಾ ಕೊಪ್ಪಳಕ್ಕೆ ಬಂದ್ರೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುತ್ತೇವೆ : ಶಿವರಾಜ ತಂಗಡಗಿ

ಕೊಪ್ಪಳ : ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ಕೊಪ್ಪಳಕ್ಕೆ ಬಂದರೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತ ಮಾಡುತ್ತೇವೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಕೊಪ್ಪಳದಿಂದ ಸ್ಪರ್ಧಿಸಿದರೆ ಸ್ವಾಗತ. ಈ ಮೂಲಕ ಇಡೀ ದೇಶಕ್ಕೆ ಕೊಪ್ಪಳ ಪರಿಚಯ ಆಗಲಿದೆ. ಕೇಂದ್ರದ ಯೋಜನೆಗಳನ್ನು ಕ್ಷೇತ್ರಕ್ಕೆ ತರಲು ಅನುಕೂಲ ಆಗಲಿದೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ‌ಇಡೀ ದೇಶಾದ್ಯಂತ ಸರ್ವೆ ಮಾಡುತ್ತಿದೆ. ಕೆಲವು ಸರ್ವೆ ನಮಗೂ ಗೊತ್ತಾಗುವುದಿಲ್ಲ. ಒಂದೊಮ್ಮೆ ಪ್ರಿಯಾಂಕಾ ಗಾಂಧಿ ಬಂದರೆ 1 ಲಕ್ಷಕ್ಕೂ ಹೆಚ್ಚು ಲೀಡ್ ನಿಂದ ಗೆಲ್ಲಿಸುತ್ತೇವೆ. ಕಳೆದ ಎರಡು ಬಾರಿ‌ ಜನರ ಮನಸ್ಸು ಕೆಡಿಸಿ ಬಿಜೆಪಿಗರು ಗೆದ್ದಿದ್ದಾರೆ. ಕೊಪ್ಪಳ ಜನರು ಮೂರನೇ ಬಾರಿ ಮೋಸ ಹೋಗುವುದಿಲ್ಲ. ಕೊಪ್ಪಳ ಜನರು ಪದೇ ಪದೆ ಅದೇ ತಪ್ಪು ಮಾಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಕೊಪ್ಪಳದಲ್ಲಿ ಆಗಿರುವ ಎಲ್ಲ ರೈಲ್ವೆ ಯೋಜನೆಗಳನ್ನು ಕಾಂಗ್ರೆಸ್ ‌ಜಾರಿ ಮಾಡಿದೆ. ಬಸವರಾಜ ರಾಯರೆಡ್ಡಿ ನಂತರ ಯಾರೂ ಕೊಪ್ಪಳಕ್ಕೆ ಕೇಂದ್ರದ ಯೋಜನೆ ತಂದಿಲ್ಲ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES