ಬೆಂಗಳೂರು : ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಮತ್ತೆ ಡಕ್ ಔಟ್ ಆಗಿದ್ದಾರೆ. ಈ ಮೂಲಕ 150ನೇ ಟಿ-20 ಪಂದ್ಯದಲ್ಲಿ ಸೊನ್ನೆ ಸುತ್ತಿ ಕೆಟ್ಟ ದಾಖಲೆ ಬರೆದಿದ್ದಾರೆ.
ಮೊಹಾಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ರನ್ಔಟ್ ಮೂಲಕ ರೋಹಿತ್ ಶೂನ್ಯಕ್ಕೆ ಔಟಾಗಿದ್ದರು. ಇಂದೋರ್ನ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ತಾವು ಎದುರಿಸಿದ ಮೊದಲನೇ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆಗಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ ನಿಗದಿತ 20 ಓವರ್ಗಳಲ್ಲಿ 172 ರನ್ಗೆ ಆಲೌಟ್ ಆಯಿತು. ಈ ಮೂಲಕ ಭಾರತಕ್ಕೆ 173 ರನ್ಗಳ ಕಠಿಣ ಗುರಿ ನೀಡಿದೆ. ಅಫ್ಘಾನಿಸ್ತಾನ ಪರ ಗುಲ್ಬದಿನ್ ನೈಬ್ ಅರ್ಧಶತಕ (57) ಸಿಡಿಸಿ ಮಿಂಚಿದರು.
ಉಳಿದಂತೆ ನಜೀಬುಲ್ಲಾ ಝದ್ರಾನ್ 23, ಕರೀಂ ಜನತ್ 20, ಮುಜೀಬ್ ಉರ್ ರೆಹಮಾನ್ 21, ಮೊಹಮ್ಮದ್ ನಬಿ 14, ರೆಹಮಾನುಲ್ಲಾ ಗುರ್ಬಾಜ್ 14 ರನ್ ಸಿಡಿಸಿದರು. ಭಾರತದ ಪರ ಅರ್ಷದೀಪ್ ಸಿಂಗ್ 3, ಅಕ್ಸರ್ ಪಟೇಲ್ ಹಾಗೂ ರವಿ ಬಿಷ್ಣೋಯ್ ತಲಾ 2, ಶಿವಂ ದುಬೆ 1 ವಿಕೆಟ್ ಪಡೆದರು.
Back to back duck for captain Rohit sharma 🙀#INDvsAFG #AFGvsIND#RohitSharmapic.twitter.com/n5T2G0X5zt
— Ashish 🖤 (@imAshish_x18) January 14, 2024