Wednesday, December 25, 2024

ಬಿಜೆಪಿಯಲ್ಲಿ ಇಂಥವರನ್ನ ಇಟ್ಕೊಂಡಿದ್ದಾರಲ್ಲಾ..? : ಹೆಚ್.ಡಿ. ರೇವಣ್ಣ ಗರಂ

ಹಾಸನ : ರಾಷ್ಟ್ರೀಯ ಪಕ್ಷ ಬಿಜೆಪಿಯಲ್ಲಿ‌ ಇಂತಹವರನ್ನ ಇಟ್ಕೊಂಡಿದ್ದಾರಲ್ಲಾ..? ನಾನು ಕೂಡ ತಾಳ್ಮೆಯಿಂದ ಇದ್ದೇನೆ ಎಂದು ಮಾಜಿ ಸಚಿವ ಹೆಚ್​.ಡಿ ರೇವಣ್ಣ ಕಿಡಿಕಾರಿದರು.

ವಕೀಲ ದೇವರಾಜೇಗೌಡ ಆರೋಪ ಸಂಬಂಧ ಹಾಸನದಲ್ಲಿ ಮಾತನಾಡಿದ ಅವರು, ಇಂಥವರನ್ನ ಇಟ್ಕೊಂಡು, ಮೊನ್ನೆ ಹಾಸನಕ್ಕೆ ಬಂದಿದ್ದ ಆ ಕೇಂದ್ರ ಮಂತ್ರಿ ನಡ್ಕೊಂಡನಲ್ಲಾ ನೋಡಿದ್ರಲ್ಲಾ..? ಎಂದು ಹರಿಹಾಯ್ದರು.

ಅವರು ಮೂರೂ ಬಿಟ್ಟಿರುವಂತಹವರು, ಹಿಂದೆ ಬ್ಯಾಕ್ ಅಪ್ ಇದೆ ಅವಕ್ಕೆ. ದೇವೇಗೌಡರ ಕುಟುಂಬವನ್ನು ಎದುರಿಸಲು ಆಗದೇ ಇರೋರು. ಇಂಥವರನ್ನು ಇಟ್ಕೊಂಡು ಬ್ಲಾಕ್ ಮೇಲ್ ಮಾಡಿಸೋಕೆ ಹೋಗ್ತಾರೆ. ನಾನು ಅದಕ್ಕೆ ಕಾನೂನು ತಜ್ಞರ ಜೊತೆ ಮಾತನಾಡಿದ್ದೇನೆ. ಕಾನೂನು ರೀತಿಯಲ್ಲೆ ಉತ್ತರ ಕೊಡುತ್ತೇನೆ ಎಂದು ಗುಡುಗಿದ್ದಾರೆ.

ತೋರುಸ್ಲಿ‌.. ನಾನು ತೋರುಸ್ತಿನಿ

ನಮ್ಮ ಕುಟುಂಬದ ಬಗ್ಗೆ ಏನೇ ಇದ್ರೂ ತನಿಖೆ ಮಾಡಿಕೊಳ್ಳಿ. ರಾಜ್ಯದಲ್ಲಿ ಬ್ಲಾಕ್ ಮೇಲ್ ರಾಜಕೀಯ ನೆಡೆಯುತ್ತಿದೆ. ಹಿಂದೆಯಿಂದ ಯಾರು ಸಪೋರ್ಟ್ ಕೊಡ್ತಿದ್ದಾರೆ ಎಂದು ಗೊತ್ತಿದೆ. ಇಂತಹವರಿಗೆ ಮಾಧ್ಯಮಗಳು ಏಕೆ ಪ್ರೋತ್ಸಾಹ ಕೊಡುತ್ತಿದ್ದಾರೆ. ನಾನು ಬೇನಾಮಿ ಆಸ್ತಿ ಮಾಡಿದ್ರೆ ತನಿಖೆ‌ ಮಾಡಲಿ. ಅದೇನೋ ತೋರುಸ್ತೀನಿ ಅಂತ ಹೇಳಿದ್ದಾರಲ್ಲಾ.. ತೋರುಸ್ಲಿ‌ ನಾನು ತೋರುಸ್ತಿನಿ. ನನಗೂ ಗೊತ್ತಿದೆ ಕಾನೂನು ಎಂದು ಗರಂ ಆಗಿದ್ದಾರೆ.

ನನ್ನ ಮೇಲೂ ಕೇಸ್ ಹಾಕಿಸಿ ಆಯ್ತು

ಎಲ್ಲರ ಹತ್ರ ಆಟ ಆಡಿದ ಹಾಗೆ ನನ್ನ ಹತ್ರ ಆಡೋಕಾಗಲ್ಲ. ನನ್ನ ಮಕ್ಕಳು, ನನ್ನ ಮೇಲೂ ಕೇಸ್ ಹಾಕಿಸಿ ಆಯ್ತು. ಅವೆಲ್ಲಾ ಏನಾಯ್ತು? ಬಿದ್ದೋಗಿಲ್ವಾ? ಎಂದು ಹೆಚ್.ಡಿ. ರೇವಣ್ಣ ಪ್ರಶ್ನೆ ಮಾಡಿದ್ದಾರೆ.

RELATED ARTICLES

Related Articles

TRENDING ARTICLES