Monday, December 23, 2024

ರೇಪ್‌ ಕೇಸ್‌ನಲ್ಲಿ ಕಾಂಗ್ರೆಸ್‌‌ ರಾಜಕಾರಣ; ಮಾಳವಿಕ ಅವಿನಾಶ್‌

ಹಾವೇರಿ: ಸಂತ್ರಸ್ತೆಗೆ ಭಯ ಹುಟ್ಟಿಸಿ ರಾಜಿಗೆ ಮುಂದಾದರು ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಮಾಳವಿಕ ಅವಿನಾಶ್‌ ಆರೋಪಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತಾನಾಡಿದ ಅವರು, ಪೊಲೀಸರು ಲಾಡ್ಜ್‌ನ ಸಿಬ್ಬಂದಿ ಕೊಟ್ಟ ದೂರಿನಂತೆ ಮೊದಲು ಪ್ರಕರಣ ದಾಖಲು ಮಾಡಿದ್ದರು. ಆದರೆ ಸಂತ್ರಸ್ತೆಗೆ ಭಯ ಹುಟ್ಟಿಸಿ, ರಾಜಿ ಮಾಡಲು ಮುಂದಾಗಿದ್ದರು. ಇದೊಂದು ವ್ಯವಸ್ಥಿತ ಹಾಗೂ ಸಂಘಟನಾತ್ಮಕ ಅಪರಾಧವಾಗಿದೆ. ಸಂತ್ರಸ್ತೆಯ ಧೈರ್ಯವನ್ನು ಧೃತಿಗೇಡಿಸುತ್ತಿದ್ದಾರೆ ಎಂದರು.

ಹಾನಗಲ್‌ನಲ್ಲಿ ನಾಲ್ಕು ಕಿಡ್ನ್ಯಾಪ್ ಪ್ರಕರಣ ದಾಖಲಾಗಿದೆ. ಆದರೆ ಮಹಿಳಾ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಎಲ್ಲಿದ್ದಾರೆ? ಸೂಪಿ ಪೋರಮ್ ಸಂಘಟನೆ ಇಲ್ಲಿ ಆ್ಯಕ್ವಿವ್ ಆಗಿದೆ. ಸರಕಾರವು ಪೊಲೀಸರ ಮೂಲಕ‌ ಆಕೆಯನ್ನು ಭಯದಲ್ಲಿ ಇರಿಸಿದ್ಯಾ ಎಂಬುದು ಬೆಳಕಿಗೆ ಬರಬೇಕು. ಸಿಎಂ ಸಿದ್ದರಾಮಯ್ಯ ನೈತಿಕ ಪೊಲೀಸ್ ಗಿರಿ ಮಾಡಲು ಬಿಡಲ್ಲ ಎನ್ನುತ್ತಾರೆ. ಘಟನೆ ನಡೆದಾಗಿನಿಂದ ಇದುವರೆಗೆ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿಲ್ಲ. ಜತೆಗೆ ಆರೋಪಿಗಳ ಬಂಧನವು ತಡವಾಗಿದೆ ಯಾಕಾಗಿ? ಇದೆಲ್ಲವು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ ಎಂದರು.

ಅತ್ಯಾಚಾರದ ಪ್ರಕರಣಗಳಲ್ಲಿ ನಮ್ಮ ಸರ್ಕಾರ ರಾಜಕಾರಣ ಮಾಡಿಲ್ಲ. ಆದರೆ ಕಾಂಗ್ರೆಸ್‌ನವರು ರಾಜಕಾರಣ ಮಾಡುತ್ತಿದ್ದಾರೆ ಎಂದರು.

RELATED ARTICLES

Related Articles

TRENDING ARTICLES