ಬೆಳಗಾವಿ : ಜಿಲ್ಲೆಯ ಅಥಣಿ ಪಟ್ಟಣಕ್ಕೆ ಆಗಮಿಸಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ‘ವೀರ ಜ್ಯೋತಿ’ ಸ್ವಾಗತಕ್ಕೆ ಅಧಿಕಾರಿಗಳು ಗೈರಾಗಿದ್ದು, ಕನ್ನಡಿಗರ ಕೆಂಗಣ್ಣಿಗೆ ಕಾರಣವಾಗಿದೆ.
ರಾಯಣ್ಣ ಹುಟ್ಟಿದ ನಾಡಿನಲ್ಲಿ ವೀರ ಜ್ಯೋತಿಗೆ ಅವಮಾನ ಮಾಡಿದ್ರ ಅಧಿಕಾರಿಗಳು ಎಂಬ ಪ್ರಶ್ನೆ ಮೂಡುತ್ತಿದೆ. ಆಯಾ ತಾಲೂಕುಗಳಲ್ಲಿ ರಾಯಣ್ಣ ವೀರ ಜ್ಯೋತಿ ಅದ್ದೂರಿ ಸ್ವಾಗತ ಸಿಕ್ಕರೆ ಅಥಣಿ ಪಟ್ಟಣದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಅಧಿಕಾರಿಗಳು ಹಾಜರಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಕರವೇ ಅಧ್ಯಕ್ಷ ಅಣ್ಣಾಸಾಬ ತೆಲಸಂಗ, ಸರ್ಕಾರಿ ಆದೇಶಕ್ಕೂ ಬೆಲೆ ಕೊಡದೆ ವೀರ ಜ್ಯೋತಿ ಸ್ವಾಗತಕ್ಕೆ ಆಧಿಕಾರಿಗಳ ಗೈರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಅಧಿಕಾರಿಗಳ ನಡೆಗೆ ತೀವ್ರ ವಿರೋಧಕ್ಕೆ ವ್ಯಕ್ತವಾಗಿದೆ. ಜಿಲ್ಲಾಧಿಕಾರಿಗಳು ಇಂತಹ ಬೇಜವಾಬ್ದಾರಿ ನಡೆ ತೋರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.