Monday, December 23, 2024

ನಟ ದರ್ಶನ್ ಟಾರ್ಗೆಟ್, ರಾಜ್ಯಕ್ಕೇ ಗೊತ್ತು : ರಾಕ್​ಲೈನ್ ವೆಂಕಟೇಶ್

ಬೆಂಗಳೂರು : ಕಾಟೇರ ಸಿನಿಮಾ ಸಕ್ಸಸ್ ಸಹಿಸಲಾಗದೇ ನಟ ದರ್ಶನ್​ ಅವರಿಗೆ ಮಸಿ ಬಳಿಯಲು ಈ ರೀತಿ ಟಾರ್ಗೆಟ್ ಮಾಡಿದ್ದಾರೆ ಎಂದು ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಕಿಡಿಕಾರಿದರು.

ಅವಧಿ ಮೀರಿ ಪಾರ್ಟಿ ಮಾಡಿದ ಪ್ರಕರಣ ಸಂಬಂಧ ನಟ ದರ್ಶನ್ ಸೇರಿದಂತೆ ಕಾಟೇರ ಚಿತ್ರತಂಡದ ವಿರುದ್ಧ ಸುಬ್ರಮಣ್ಯಪುರ ಠಾಣೆಗೆ ತೆರಳಿ ವಿಚಾರಣೆಗೆ ಹಾಜರಾಗಿದೆ.

ವಿಚಾರಣೆ ಬಳಿಕ ಮಾತನಾಡಿದ ಅವರು, ಅಬಕಾರಿ ಕಾಯ್ದೆ ಪ್ರಕಾರ ನಾವು ಯಾವುದೇ ನಿಯಮ ಉಲ್ಲಂಘಿಸಿಲ್ಲ. ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಅನ್ನೋದು ಗೊತ್ತಿದೆ. ಇದನ್ನು ಇಲ್ಲಿಗೆ ನಿಲ್ಲಿಸಿ.. ಎಂದು ಎಚ್ಚರಿಕೆ ನೀಡಿದರು.

ನಮಗ್ಯಾಕೆ ನೊಟೀಸ್ ಕೊಟ್ಟಿದ್ದಾರೆ?

ಪೊಲೀಸರ ಮುಂದೆ ಹೇಳಿಕೆ ನೀಡಿದ್ದೇವೆ. ಅದನ್ನ ನಾವು ಹೇಳಿದ್ರೆ ತಪ್ಪಾಗುತ್ತೆ. ನಟ ಡಾಲಿ, ಅಭಿಷೇಕ್, ಚಿಕ್ಕಣ್ಣ ಇವರ ಯಶಸ್ಸಿಗೆ ದರ್ಶನ್ ಬೆನ್ನೆಲುಬಾಗಿ ನಿಂತಿದ್ದಿದ್ದಾರೆ. ಅವರ ವಿರುದ್ಧ ಈ ರೀತಿ ಷಡ್ಯಂತರ ಆಗಿದೆ. ಬೆಂಗಳೂರಿನಲ್ಲಿ ಹಲವು ಬಾರ್ ಅಂಡ್ ರೆಸ್ಟೋರೆಂಟ್​ಗಳು ತಡರಾತ್ರಿವರೆಗೂ ಓಪನ್ ಆಗಿರುತ್ತೆ. ಅವರಿಗೆ ನೊಟೀಸ್ ನೀಡಿಲ್ಲ, ಆದ್ರೆ ನಮಗೆ ಕೊಟ್ಟಿದ್ದಾರೆ ಎಂದು ಹೇಳಿದರು.

ನ್ಯಾಯಾಂಗಕ್ಕೆ ನಾವು ತಲೆ ಬಾಗ್ತೀವಿ

ಒಂದು ಗಂಟೆ ಆದ್ಮೇಲೆ ಊಟ ಮಾಡಿದ್ದು, ಅಡುಗೆಯವರು ಕಮ್ಮಿ ಇರೋದ್ರಿಂದ ಅವ್ರು ಲೇಟ್ ಮಾಡಿದ್ರು. ನ್ಯಾಯಾಂಗಕ್ಕೆ ನಾವು ತಲೆ ಬಾಗ್ತೀವಿ. ಆ ವೇಳೆ ಪೊಲೀಸರು ಯಾರೂ ಬಂದಿಲ್ಲ. ಯಾರೂ ಕೇಳಿಲ್ಲ, ನಮ್ಮತ್ರ ಯಾರೂ ಬಂದಿಲ್ಲ ಎಂದು ರಾಕ್​ಲೈನ್​ ವೆಂಕಟೇಶ್ ತಿಳಿಸಿದರು.

RELATED ARTICLES

Related Articles

TRENDING ARTICLES