ಬೆಂಗಳೂರು: ಲೇಡಿ ಸೂಪರ್ ಸ್ಟಾರ್ ನಯನತಾರಾ ಅಭಿನಯದ ʼಅನ್ನಪೂರ್ಣಿʼ ಚಿತ್ರ ಇತ್ತೀಚಿಗೆ ತೆರಕಂಡು ಬಳಿಕ ವಿವಾದಾತ್ಮಕ ಹೇಳಿಕೆಗಳಿಗೆ ಸಾಕ್ಷಿಯಾಗಿದೆ ಎಂದು ಆರೋಪ ಕೇಳಿಬಂದಿದೆ.
ʼಅನ್ನಪೂರ್ಣಿʼ ಚಿತ್ರ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಿತ್ತು. ಟೈಟಲ್ ರೋಲ್‌ನಲ್ಲಿ ನಯನತಾರಾ ಕಾಣಿಸಿಕೊಂಡಿರುವ ಈ ಸಿನಿಮಾ ಶಿವಸೇನೆಯ ಮಾಜಿ ನಾಯಕ ರಮೇಶ್ ಸೋಲಂಕಿ ‘ಹಿಂದೂ ವಿರೋಧಿ’ ಎಂದು ಆರೋಪಿಸಿದ್ದರು.
ಸಿನಿಮಾ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದೆ ಎಂದು ದೂರಿದ್ದರು. ಶಿವಸೇನೆ ಮಾಜಿ ನಾಯಕ ರಮೇಶ್ ಸೋಲಂಕಿ ಕೇಸ್ ಕೂಡ ದಾಖಲಿಸಿದ್ದರು. ಇದಾದ ಬಳಿಕ ನೆಟ್‌ಫ್ಲಿಕ್ಸ್ ಎಚ್ಚೆತ್ತುಕೊಂಡಿದ್ದು, ಸಿನಿಮಾವನ್ನು ಡಿಲೀಟ್ ಮಾಡಿದೆ.
ನಿರ್ಮಾಣ ಸಂಸ್ಥೆ ಜೀ ಸ್ಟುಡಿಯೋ ಕ್ಷಮೆ ಕೂಡ ಕೇಳಿದೆ. ಡಿಸೆಂಬರ್ 29ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಪ್ರಾರಂಭಿಸಿತ್ತು.
Its hightime these anti Hindu @netflix and @ZeeStudios_ are taught legal lessons
Enough of their nonsense now #BoycottNetflix https://t.co/xZY5UMt9Ni
— Ramesh Solanki🇮🇳 (@Rajput_Ramesh) January 10, 2024
ವಿಎಚ್‌ಪಿಗೆ ಕ್ಷಮೆ ಕೇಳಿದ ಜೀ ಸ್ಟುಡಿಯೋಸ್!
ಈ ವಿವಾದದ ಬಳಿಕ ನೆಟ್‌ಫ್ಲಿಕ್ಸ್ ಎಚ್ಚೆತ್ತುಕೊಂಡಿದೆ. ಈಗಾಗಲೇ ಸಿನಿಮಾನ ತೆಗೆಯಲಾಗಿದೆ. ವಿಶ್ವ ಹಿಂದೂ ಪರಿಷತ್ಗೆ ಜಿ ಸ್ಟುಡಿಯೊ ಕ್ಷಮೆ ಕೇಳಿದೆ. ಜತೆಗೆ ವಿವಾದಾತ್ಮಕ ದೃಶ್ಯವನ್ನು ತೆಗೆಯುವ ಭರವಸೆ ನೀಡಿದೆ. ‘ನಮಗೆ ಧಾರ್ಮಿಕ ಭಾವನೆಗೆ ಹಾನಿ ಮಾಡುವ ಯಾವುದೇ ಉದ್ದೇಶ ಇಲ್ಲ. ನಾವು ಕ್ಷಮೆ ಕೇಳುತ್ತೇವೆ’ ಎಂದು ನಿರ್ಮಾಣ ಸಂಸ್ಥೆ ಜೀ ಸ್ಟುಡಿಯೋ ತಿಳಿಸಿದೆ.
ರಮೇಶ್ ಸೋಲಂಕಿ ಹಿಂದೂ ವಿರೋಧಿ ದೃಶ್ಯಗಳು ಯಾವುವು ಎನ್ನುವುದನ್ನು ಪಟ್ಟಿ ಮಾಡಿ ಕೊಟ್ಟಿದ್ದರು. ʼʼ1. ಹಿಂದೂ ಪೂಜಾರಿಯ ಮಗಳು ಬಿರಿಯಾನಿ ಅಡುಗೆ ಮಾಡುವ ವೇಳೆ ನಮಾಜ್ ಮಾಡುತ್ತಾಳೆ. 2. ಲವ್ ಜಿಹಾದ್ ಅನ್ನು ಪ್ರಚಾರ ಮಾಡಲಾಗಿದೆ. 3. ಫರ್ಹಾನ್ ಎನ್ನುವ ಪಾತ್ರ ಭಗವಾನ್ ಶ್ರೀರಾಮ ಮಾಂಸ ತಿನ್ನುವವರಾಗಿದ್ದರು ಎಂದು ಹೇಳುವ ದೃಶ್ಯ ಇದೆ. ನೆಟ್‌ಫ್ಲಿಕ್ಸ್ ಇಂಡಿಯಾ ಮತ್ತು ಝೀ ಸ್ಟುಡಿಯೋಸ್ ಉದ್ದೇಶಪೂರ್ವಕವಾಗಿ ಈ ಚಿತ್ರವನ್ನು ನಿರ್ಮಿಸಿದೆ. ಹಿಂದೂ ಭಾವನೆಗಳಿಗೆ ಧಕ್ಕೆ ತರಲು ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ಸಮಯದಲ್ಲೇ ಚಿತ್ರ ಬಿಡುಗಡೆ ಮಾಡಲಾಗಿದೆ” ಎಂದು ಅವರು ಬರೆದಿದ್ದರು.
ಹಿರಿಯ ಕಲಾವಿದರಾದ ಕನ್ನಡಿಗ ಅಚ್ಯುತ್ ಕುಮಾರ್, ಸತ್ಯರಾಜ್, ಕಾರ್ತಿಕ್ ಕುಮಾರ್, ರೇಣುಕಾ, ಪಾರ್ವತಿ ಟಿ. ಮತ್ತಿತರರು ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬ್ರಾಹ್ಮಣ ಕುಟುಂಬದ ಯುವತಿ (ನಯನತಾರಾ) ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್‌ಗೆ ಸೇರಿ ಅಲ್ಲಿ ಯಾವೆಲ್ಲ ಸವಾಲುಗಳನ್ನು ಎದುರಿಸುತ್ತಾಳೆ ಎನ್ನುವುದೇ ಚಿತ್ರದ ಕಥೆ. ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾ ಕೇವಲ 6 ಕೋಟಿ ರೂ. ಗಳಿಸಿದೆ.