Wednesday, January 22, 2025

ಲವರ್​ ಜೊತೆ ಸೇರಿ ಬಾವನನ್ನೇ ಮುಗಿಸಿದ ನಾದಿನಿ!

ಕಲಬುರಗಿ: ಹೆಂಡತಿಯ ತಂಗಿಯನ್ನು ಮಂಚಕ್ಕೆ ಕರೆಯುತ್ತಿದ್ದ ಭಾವನ ಕಾಟ ತಾಳದೆ ಪ್ರಿಯಕರನೊಂದಿಗೆ ಸೇರಿ ಭಾವನನ್ನೆ ಕೊಲೆ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾದಿನಿ ಸೇರಿ 7 ಜನ ಆರೋಪಿಗಳನ್ನು ಬಂಧಿಸುವಲ್ಲಿ ಕಲಬುರಗಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳೆದ ತಿಂಗಳು ಕಮಲಾಪುರದಿಂದ ಓಕಳಿಗೆ ಹೋಗುವ ರಸ್ತೆಯಲ್ಲಿ ನಡೆದ ಜೇವರ್ಗಿ ತಾಲೂಕಿನ ಕೂಡಿ ಗ್ರಾಮದ ಅಂಬಾರಾಯ ಅಲಿಯಾಸ್ ಅಂಬ್ರೇಶ್ ಪಟ್ಟೇದಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಸೇರಿ 7 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

 ಪ್ರಕರಣದ ವಿವರ

ಸ್ವತಃ ನಾದಿನಿಯೇ ತನ್ನ ಅಕ್ಕನ ಗಂಡನನ್ನೇ ಕೊಲೆ ಮಾಡಿಸಿದ ಘಟನೆ ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಓಕಳಿ ಗ್ರಾಮದ ಹೊರವಲಯದಲ್ಲಿ ಕಳೆದ ಡಿಸೆಂಬರ್‌ 31 ರಂದು ನಡೆದಿತ್ತು. ಪೊಲೀಸರಿಗೆ ಮೃತದೇಹ ಪತ್ತೆಯಾಗಿತ್ತು. ನಿರ್ಜನ ಪ್ರದೇಶದಲ್ಲಿ ಮೃತ ದೇಹ ಸಿಕ್ಕಿದ್ದರಿಂದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿದು ಕೊಂಡಿದ್ದರು. ಆದರೆ, ಮೃತದೇಹ ನೋಡಿದರೆ ಅಪಘಾತಕ್ಕಿಂತ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿತ್ತು.ನಂತರ ಮೃತದೇಹದ ಮರಣೋತ್ತರ ಪರೀಕ್ಷೆ ಮಾಡಿದಾಗ ಇದು ಕೊಲೆ ಎಂಬುದು ತಿಳಿದು ಬಂದಿತ್ತು.

ಇನ್ನು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೊಲೆಯ ಜಾಡು ಹಿಡಿದವರಿಗೆ ಆತನ ಪತ್ನಿ ಹಾಗೂ ನಾದಿನಿಯ ಮೇಲೆ ಅನುಮಾನ ವ್ಯಕ್ತವಾಗಿ ನಾದಿನಿಯನ್ನು ವಿಚಾರಣೆ ಮಾಡಿದಾಗ ಕೊಲೆ ಮಾಡಿಸಿರುವ ಬಗ್ಗೆ ಬಾಯಿ ಬಿಟ್ಟಿದ್ದಾಳೆ

 

RELATED ARTICLES

Related Articles

TRENDING ARTICLES